ಸನ್ನತಿ ಪ್ರಾಧಿಕಾರದಿಂದ ನಡೆಯದ ಪ್ರಗತಿ

klb2
ವಾಡಿಯಲ್ಲಿ ಜಿಲ್ಲಾ ಮಟ್ಟದ ಧಮ್ಮಕ್ರಾಂತಿ ಉತ್ಸವ ಯಶಸ್ವಿಗೆ ಪೂರ್ವಭಾವಿ ಸಭೆ ಜರುಗಿತು. ವಿಠ್ಠಲ್ ದೊಡ್ಡಮನಿ, ಮರಿಯಪ್ಪ ಹಳ್ಳಿ, ಸೂರ್ಯಕಾಂತ ನಿಂಬಾಳಕರ, ಸುರೇಶ ಮೆಂಗನ, ಲಕ್ಷ್ಮೀಕಾಂತ ಹುಬ್ಬಳ್ಳಿ, ಸಂತೋಷ ಮೇಲ್ಮನಿ, ದಿನೇಶ ದೊಡ್ಡಮನಿ, ಸತೀಶ ಬಟ್ಟರ್ಕಿ, ಸಾಯಿಬಣ್ಣ ಬನ್ನಟ್ಟಿ, ರಾಜು ಕಪನೂರ ಇದ್ದರು.
Published on

ವಾಡಿ: ಸಾಮಾಜಿಕ ನ್ಯಾಯದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರಗಳೇ ನಿರಂತರ ನಮ್ಮನ್ನೇ ಮೋಸ ಮಾಡುತ್ತಿರುವ ದುರಂತವೇ ಸರಿ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಬೇಸರ ವ್ಯಕ್ತಪಡಿಸಿದರು.

ಸಿದ್ಧಾರ್ಥ ಭವನದಲ್ಲಿ ಧಮ್ಮ ಭಾನುವಾರ ಹಮ್ಮಿಕೊಂಡಿದ್ದ ಕಲಬುರಗಿಯಲ್ಲಿ ಅ.13ರಿಂದ 14ರವರೆಗೆ ನಡೆಯಲಿರುವ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಚಿತ್ತಾಪುರ ತಾಲೂಕು ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಾಕಷ್ಟು ಪ್ರಯತ್ನಗಳ ಮಧ್ಯೆಯೂ ಬೌದ್ಧರು ಎಂದು ಜಾತಿಪ್ರಮಾಣ ಪತ್ರ ನೀಡಲು ಸಾಧ್ಯವಾಗಿಲ್ಲ. ಸಾಮ್ರಾಟ್ ಅಶೋಕ್ ತನ್ನ ಕೊನೆಯ ದಿನಗಳನ್ನು ಸನ್ನತಿ (ಕನಗನಹಳ್ಳಿ)ಯಲ್ಲಿ ಕಳೆದಿದ್ದು, ಅದು ಬೌದ್ಧರ ಪವಿತ್ರ ಸ್ಥಳವಾಗಿದೆ. ಆದರೆ ಹೆಸರಿಗೆ ಮಾತ್ರ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಯಾವುದೇ ಪ್ರಗತಿ ಕೆಲಸಗಳು ಆಗಿಲ್ಲ ಎಂದು ದೂರಿದರು.

ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳ ಮಾತನಾಡಿ, ಕಲಬುರಗಿಯ ಧಮ್ಮ ದೀಕ್ಷಾ ಭೂಮಿಯಲ್ಲಿ ಅ.13, 14 ರಂದು 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಧಮ್ಮ ಕ್ರಾಂತಿ ಉತ್ಸವ ಜರುಗಲಿದೆ. 13ರಂದು ಕಲಾತ್ಮಕ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 14 ರಂದು ಧಮ್ಮದೀಕ್ಷಾ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗುವುದು. ಭಂತೇಜಿ, ಸಾಮಾಜಿಕ ಕಾರ್ಯಕರ್ತರು, ಬುದ್ಧಿ ಜೀವಿಗಳು ಸೇರಿ ಸುಮಾರು 25 ರಿಂದ 30 ಸಾವಿರ ಜನ ಸೇರುವ ನಿರೀಕ್ಷೆಯಿದೆ ಎಂದರು.

ಹಿರಿಯ ಮುಖಂಡ ವಿಠ್ಠಲ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸುರೇಶ ಮೆಂಗನ, ಲಕ್ಷ್ಮೀಕಾಂತ ಹುಬ್ಬಳ್ಳಿ, ಸಂತೋಷ ಮೇಲ್ಮನಿ, ಸಾಯಿಬಣ್ಣ ಬನ್ನಟ್ಟಿ, ರಾಜು ಕಪನೂರ, ಶರಣಬಸ್ಸು ಶಿರೂರಕರ, ರಣಧೀರ ಹೊಸಮನಿ, ದಿನೇಶ ದೊಡ್ಡಮನಿ, ಸತೀಶ ಬಟ್ಟರ್ಕಿ, ರಾಘವೇಂದ್ರ ಫರತಾಬಾದ್, ಮಲ್ಲೇಶ ನಾಟೇಕರ, ಮಲ್ಲಣ್ಣ ಮಸ್ಕಿ, ಸಂತೋಷ ಜೋಗೂರ, ಶ್ರೀಮಂತ ಭಾವಿಮನಿ, ಶಿವಯೋಗಿ ದೇವಿಂದ್ರಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net