ಸನ್ನಡತೆಗೆ ಮತ್ತೊಂದು ಹೆಸರು

CTD SHIVAYOGI C KALASADA-----
Published on

ಚಿತ್ರದುರ್ಗ: ಸನ್ನಡತೆಗೆ ಮತ್ತೊಂದು ಹೆಸರೇ ಎಸ್.ಎಂ.ಕೃಷ್ಣ ಎಂದು ಮುರುಘಾಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅವರು,ಕೃಷ್ಣ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಾಡು ಕಂಡ ಅದ್ಭುತ ರಾಜಕಾರಣಿ,ಮರೆಯಲಾಗದ ವ್ಯಕ್ತಿತ್ವ,ಮೇಧಾವಿ,ನಾ ಡಿನ ಜನಪ್ರಿಯ ಯೋಜನೆಗಳ ಹರಿಕಾರ,ಶಿಸ್ತು ಮತ್ತು ಪ್ರಬುದ್ಧ ಆಡಳಿತದ ರೂವಾರಿ,ಸಜ್ಜನಿಕೆ, ಸದಾಚಾರ, ಸನ್ನಡತೆಗೆ ಕೃಷ್ಣ ಹೆಸರಾಗಿದ್ದ ವರು. ಅಲಂಕರಿಸಿದ ಎಲ್ಲ ಹುದ್ದೆಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಸಾರ್ವಜನಿಕ ಜೀವನದಲ್ಲಿ ಕೀರ್ತಿ,ಗೌರವ ಹೆಚ್ಚಿಸಿದ ಸುಸಂ ಸ್ಕೃತ ರಾಜಕಾರಣಿಯನ್ನು ಕಳೆದುಕೊಂಡು ನಾಡು ಬಡವಾಗಿದೆ. ಅವರ ಅಗಲಿಕೆ ದುಃಖವನ್ನು ಭರಿಸುವ ಶಕ್ತಿಯನ್ನು ಬಸವಾದಿ ಪ್ರಮಥ ರು ಕರುಣಿಸಲಿ ಎಂದು ಕಳಸದ ಹೇಳಿದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net