ಸನಾತನ ಹಿಂದು ಸಮಾಜ ಎಂದೆಂದಿಗೂ ಗಟ್ಟಿ

ctd000001
Published on

ಚಿತ್ರದುರ್ಗ: ಹಿಂದು ಎಂದರೆ ಎಲ್ಲರೂ ಒಂದೇ,ಹಿಂದು ಸಮಾಜದಲ್ಲಿ ಜಾತಿ,ವರ್ಗದ ಭೇದವಿಲ್ಲವೆಂದು ಬಜರಂಗದಳದ ರಾಷ್ಟ್ರೀಯ ಸಂಯೋ ಜಕ ನೀರಜ್‌ದೊನೇರಿಯಾ ಹೇಳಿದರು.
ವಿಶ್ವಹಿಂದು ಪರಿಷತ್,ಬಜರಂಗಳದ ಹಿಂದು ಮಹಾಗಣಪತಿ ಮಹೋತ್ಸವ ಸಮಿತಿ,ನಗರದ ಜೈನಧಾಮದಲ್ಲಿ ಪ್ರತಿಷ್ಠಾಪಿಸಿದ್ದ ಗರುಢ ರೂಢ ಗಣಪತಿ ವಿರ್ಸಜನೆಯ ಬೃಹತ್ ಶೋಭಾಯಾತ್ರೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು,ಸನಾನತ ಹಿಂದು ಧರ್ಮ ನ ಮ್ಮೆಲ್ಲರಿಗೂ ಮಾತೃ ಸಮಾನವಾದದ್ದಾಗಿದೆ. ಹಿಂದು ಸಮಾಜದಲ್ಲಿ ಭೇದಭಾವವಿಲ್ಲ. ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟನ್ನು ಪ್ರದರ್ಶಿಸ ಬೇಕಿದೆ. ವಿಘಟನೆಯಿಂದ ಬಲವಿಲ್ಲ,ಇಂತಹ ಧಾರ್ಮಿಕ ಕಾರ‌್ಯಕ್ರಮಗಳು ಸಮಾಜವನ್ನು ಸದೃಢಗೊಳಿಸುತ್ತದೆ.
ಈಚೆಗೆ ಹಿಂದು ಸಮಾಜವನ್ನು ಒಡೆಯುವ ಘಟನೆಗಳಾಗುತ್ತಿದ್ದು,ಇವುಗಳನ್ನು ನಿಯಂತ್ರಿಸಬೇಕು ಮತ್ತು ಇಂಥ ಘಟನೆಗಳಿಗೆ ಕಾರ ಣವಾಗುವಂಥ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ಅತ್ಯಂತ ಪುರಾತನಹಿಂದು ಧರ್ಮಕ್ಕೆ ತನ್ನದೇ ಆದ ಇತಿಹಾಸವಿದೆ. ಇಂಥ ಧರ್ಮವನ್ನು ಕೆಲವರು ಡೆಂೇ,ಮಲೇರಿಯಾಕ್ಕೆ ಹೋಲಿಸಿದ್ದಾರೆಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೆಸರಿಸದೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಆದರೆ ಅವರಿಗೆ ಗೊತ್ತಿರಲಿ,ಈ ನೆಲದಲ್ಲಿ ಹಿಂದೆ ಸನಾತನ ಹಿಂದು ಧರ್ಮ ಇತ್ತು. ಇಂದು ಇದೆ, ಮುಂದು ಕೂಡ ಗಟ್ಟಿಯಾಗಿರುತ್ತದೆ ಎಂದರು.
ಶ್ರೀ ರಾಮಮಂದಿರ ನಿರ್ಮಾಣ ಯಾವಾಗ ಮಾಡುತ್ತೀರಿ ಎಂದು ವ್ಯಂಗವಾಗಿ ಪ್ರಶ್ನಿಸಿದ್ದವರಿಗೆ,ಶ್ರೀ ರಾಮಲಲ್ಲಾನ ಜನ್ಮ ಸ್ಥಾನದಲ್ಲೇ ಭವ್ಯಮಂದಿರವನ್ನು ನಿರ್ಮಿಸಿ ತಕ್ಕ ಉತ್ತರ ಕೊಟ್ಟಿದ್ದೇವೆ. ಶ್ರೀ ಮಂದಿರ ನಮ್ಮ ಹೆಮ್ಮೆಯ ಸಂಕೇತವೆಂದ ಅವರು,ಹಿಂದು ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆ,ಈ ನಿಟ್ಟಿನಲ್ಲಿ ಬಜರಂಗದಳ ಕಾರ‌್ಯಕರ್ತರು ಸೇನಾನಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ಸೇವೆ,ಸ್ವಚ್ಛತೆ,ಸಂಸ್ಕಾರದಿಂದ ಕೂಡಿದ ಧರ್ಮ ನಮ್ಮದು,ಇದನ್ನು ಪ್ರಪಂಚಕ್ಕೆ ತೋರಿಸಿದ್ದೇವೆ. ಜಮ್ಮು-ಕಾಶ್ಮೀರವೀಗ ಆತಂಕ ವಾದಿಗ ಳಿಂದ ಮುಕ್ತವಾಗಿದೆ. ದೇಶ ದ್ರೋಹಿಗಳಿಗೆ ಈ ನೆಲದಲ್ಲಿರಲು ಬಿಡುವುದಿಲ್ಲ.ಆತಂಕವಾದಕ್ಕೆ ಅವಕಾಶ ಕೊಡುವುದಿಲ್ಲವೆಂದು ಗುಡುಗಿದ ರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಈ ಶೋಭಾಯಾತ್ರೆ ದೇಶದಲ್ಲೇ ಹೆಸರುವಾಸಿಯಾಗಿದೆ. ವಿಎಚ್‌ಪಿ,ಬಜರಂಗದಳ ಇಷ್ಟೊಂದು ಜ ನರನ್ನು ಸಂಘಟಿಸಿದ್ದಾರೆ. ಈ ಕಾರ‌್ಯ ಹೀಗೆ ಮುಂದುವರಿಯಬೇಕಿದೆ. ಇಲ್ಲಿ ಮಠಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ಎಲ್ಲ ಮಠಾಧೀಶರ ಆರ್ಶೀವಾದ ನಮ್ಮೆಲ್ಲರ ಮೇಲಿದೆ ಎಂದರು.
ಶ್ರೀಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಶ್ರೀ ಶಾಂತವೀರ ಸ್ವಾಮೀಜಿ,ಶ್ರೀವಾಲ್ಮೀಕಿ ಪ್ರಸನ್ನಾಂದಪುರಿ ಸ್ವಾಮೀಜಿ,ಶ್ರೀ ಶಿವಲಿ ಂಗಾನಂದ ಸ್ವಾಮೀಜಿ,ಶ್ರೀಪುರುಷೋತ್ತಮಾನಂದ ಸ್ವಾಮೀಜಿ,ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ,ಶ್ರೀಬಸವ ಮಾಚಿದೇವ ಸ್ವಾಮೀ ಜಿ,ಶ್ರೀಇಮ್ಮಡಿ ಕೇತೇಶ್ವರ ಸ್ವಾಮೀಜಿ ಮತ್ತಿತರ ಮಠಾಧೀಶರು,ಸಂಸದ ಗೋವಿಂದ ಎಂ.ಕಾರಜೋಳ,ಶಾಸಕ ಕೆ.ಸಿ.ವಿರೇಂದ್ರಪಪ್ಪಿ,ಎಂ ಎಲ್‌ಸಿ ಕೆ.ಎಸ್.ನವೀನ್,ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ನಗರಸಭಾ ಅಧ್ಯಕ್ಷೆ ಸುಮಿತಾರಾಘವೇಂದ್ರ,ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಷಡಾಕ್ಷರ ಪ್ಪ,ಎಡಿಸಿ ಬಿ.ಟಿ.ಕುಮಾರಸ್ವಾಮಿ,ಎಸಿ ಎಂ.ಕಾರ್ತಿಕ್,ತಹಸೀಲ್ದಾರ್ ಡಾ.ನಾಗವೇಣಿ,ಸಮಿತಿ ಅಧ್ಯಕ್ಷ ನಯನ್,ಟಿ.ಬದ್ರಿ ನಾಥ್,ಶರಣ್,ಜಿ.ಎಸ್.ಅನಿತ್‌ಕುಮಾರ್,ಚಂದ್ರಶೇಖರ್,ಕೇಶವ್,ಪ್ರಭಂಜನ್,ಶ್ರೀನಿವಾಸ್,ಟೈಗರ್ ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

1.ಮುಕ್ತಿಭಾವುಟ-2.05ಲಕ್ಷ ರೂ.-ಎನ್‌ಜೆಹಳ್ಳಿ ಮಂಜುನಾಥ್
2.ಹೂವಿನಹಾರ- 1.60 ಲಕ್ಷ ರೂ.-ತೊರೇಮನಹಳ್ಳಿತಿಪ್ಪೇಸ್ವಾಮಿ
3.ಗಣಪತಿಗೆ ಹಾಕಿದ ನೋಟಿನ ಹಾರ-2.50 ಲಕ್ಷ ರೂ.-ಕೆಜಿಟಿ ಗುರುಮೂರ್ತಿ
4.ಪುರಿ ಜಗನ್ನಾಥ ದೇವಾಲಯ ಮಾದರಿ-2.25 ಲಕ್ಷ ರೂ.-ಕೆ.ಸಿ.ನಾಗರಾಜ್
5.ಹಣ್ಣಿನಪುಟ್ಟಿ-61 ಸಾವಿರ ರೂ.-ಉಮೇಶ್‌ಕಾರಜೋಳ
6.ಪ್ರಸಾದ-70 ಸಾವಿರ ರೂ.-ಶಾಮಿಯಾನ ಮೋಹನ್
7.ಗಣಪತಿ ಭಾವಚಿತ್ರ- 60 ಸಾವಿರ ರೂ.-ಮಂಜಣ್ಣ
8.ಮೆಕ್ಕೆಜೋಳದ ಹಾರ-40 ಸಾವಿರ ರೂ.ವಿಶ್ವಬಂಧು ಕೊಟ್ರೇಶ್

ಪೊಲೀಸರ ಹೈ ಅಲರ್ಟ್,ತಪಾಸಣೆ
ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕಬಂದೋಬಸ್ತ್‌ನೊಂದಿಗೆ ಪೊಲೀಸರು ಆರು ತಂಡಗಳನ್ನು ರಚಿಸಿಕೊಂಡು ನಗರ ವಿ ವಿಧ ತಪಾಸಣೆ ನಡೆಸಿದರು. ಬಾಂಬ್‌ನಿಷ್ಕ್ರೀಯ ಹಾಗೂ ಶ್ವಾನದಳದೊಂದಿಗೆ ಬಸ್‌ನಿಲ್ದಾಣ,ವಸತಿಗೃಹಗಳು,ಪ್ರಮುಖ ಹೋಟೆಲ್‌ಗಳು ಇತ್ಯಾದಿ ಕಡೆ ಸುದೀರ್ಘ ಪರಿಶೀಲನೆ ನಡೆಸಿದರು. ವಸತಿಗೃಹಗಳಲ್ಲಿ ತಂಗಿದವರ ಮೇಲೂ ಮಾಹಿತಿ ಕಲೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net