ಸದ್ಭವನಾ ದಿನಾಚರಣೆ

c4da8ac0-7e83-49c4-8740-c067af6a71f0--003
Published on

ಚಿತ್ರದುರ್ಗ:ಸರ್ವರಲ್ಲೂ ಸದ್ಭಾವನೆ ಮೂಡಿಸುವ ಮೂಲಕ ಪರಸ್ಪರ ಶಾಂತಿ,ಸಹಬಾಳ್ವೆಯ ಉದ್ದೇಶದಿಂದ ಸದ್ಭಾವನಾ ದಿನವನ್ನು ಆ ಚರಿಸಲಾಗುತ್ತದೆ ಎಂದು ಎಸ್‌ಜೆಎಂ ಪಾಲಿಟೆಕ್ನಿಕ್ ಹಿರಿಯ ಪ್ರಾಧ್ಯಾಪಕ ಸಿ.ಜಿ.ರೇವಣಸಿದ್ದಪ್ಪ ಅಭಿಪ್ರಾಯಪಟ್ಟರು. ನಗರದ ಎಸ್.ಜೆ. ಎಂ ಪಾಲಿಟೆಕ್ನಿಕ್‌ನಲ್ಲಿ ಎನ್‌ಎಸ್‌ಎಸ್ ಘಟಕದಿಂದ ಏರ್ಪಡಿಸಿದ್ದ ಸದ್ಭಾವನಾದ ದಿನದ ಅಂಗವಾಗಿ ಏರ್ಪಡಿಸಿದ್ದ ಜಾಗೃತಿ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಸಂವಿಧಾನದ ಆಶಯದಂತೆ ಎಲ್ಲರೂ ಸಹಬಾಳ್ವೆಯಿಂದ ಜೀವನ ನಡೆಸಬೇಕಿದೆ ಎಂದರು. ಪ್ರತಿಜ್ಞಾವಿಧಿ ಬೋಧಿ ಸಿದರು. ಪ್ರಾಚಾರ‌್ಯ ಎಸ್.ವಿ.ರವಿಶಂಕರ್.ಎನ್‌ಎಸ್‌ಎಸ್ ಘಟಕದ ಅಧಿಕಾರಿ ಗೋವಿಂದರಾಜ್,ಅಧೀಕ್ಷಕ ಸಿ.ಎನ್.ಮೋಹನ್ ಅಧ್ಯಾಪ ಕರಾದ ನಳಿನಾಕ್ಷಿ ,ಟಿ.ಲತಾ,ಜೆ.ಪ್ರತಿಮಾರಾಜೇಶ್, ಗಂಗಾಧರ್,ಕೆ.ಸುರೇಶ್, ಜಿ.ಕೊಟ್ರಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net