ಸದ್ದಾಂ ಹುಸೇನ್ ಗ್ರಾಪಂ ಅಧ್ಯಕ್ಷ

KLB4
ಜೇವರ್ಗಿ ತಾಲೂಕಿನ ಗುಡೂರ (ಎಸ್‌ಎ) ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸದ್ದಾಂ ಹುಸೇನ್ ಜಮಾದಾರ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಶ್ರೀಶೈಲ ಹೊನಗುಂಟಿ, ದೌಲಪ್ಪ ಮದನ್, ಸುರೇಶ ಹವಾಲ್ದಾರ, ಮೈಲಾರಿ ಹೊನಗುಂಟಿ, ಶೌಕತ್ ಬಳ್ಳುಂಡಗಿ, ದ್ಯಾವಣ್ಣ ಹೆಗಣಿ ಇದ್ದರು.
Published on

ಜೇವರ್ಗಿ: ಗುಡೂರ (ಎಸ್‌ಎ) ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಸದ್ದಾಂ ಹುಸೇನ್ ಜಮಾದಾರ ಗುರುವಾರ ಅವಿರೋಧ ಆಯ್ಕೆಯಾದರು.
ಹಿಂದಿನ ಅಧ್ಯಕ್ಷ ದೇವಿಂದ್ರ ಗುತ್ತೇದಾರ್ ಅವರರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗುರುವಾರ ಮತದಾನ ನಿರ್ಧಾರವಾಗಿತ್ತು. ಒಟ್ಟು 15 ಸದಸ್ಯರ ಬಲ ಹೊಂದಿದ್ದು, 10 ಸದಸ್ಯರು ಹಾಜರಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಸದ್ದಾಂ ಹುಸೇನ್ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಕಾಂಗ್ರೆಸ್ ಬೆಂಬಲಿತ ಸದ್ದಾಂ ಹುಸೇನ್ ಜಮಾದಾರ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಮುಖಂಡರು, ಕಾರ್ಯಕರ್ತರು ವಿಜಯೋತ್ಸವ ನಡೆಸಿದರು. ಶ್ರೀಶೈಲ ಹೊನಗುಂಟಿ, ದೌಲಪ್ಪ ಮದನ್, ಸುರೇಶ ಹವಾಲ್ದಾರ, ಮೈಲಾರಿ ಹೊನಗುಂಟಿ, ಶೌಕತ್ ಬಳ್ಳುಂಡಗಿ, ದ್ಯಾವಣ್ಣ ಹೆಗಣಿ, ಎಂ.ಜಿ.ಪಾಟೀಲ್, ಮರೆಪ್ಪ ಬುಟ್ನಾಳ, ಸಂತೋಷ ಚವ್ಹಾಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net