ಸದ್ಗುರು ಬೆಂಕಿತಾತ ಮಠದಲ್ಲಿ ಶ್ರಾವಣ ಸಂಪನ್ನ

PH 09
Published on

ಶಹಾಬಾದ್: ನಿಜಾಮ್ ಬಜಾರ್‌ನ ಸದ್ಗುರು ಸದಾಶಿವ ಬೆಂಕಿತಾತ ಮಠದಲ್ಲಿ ಶ್ರೀ ಸದ್ಗುರು ನಾರಾಯಣಸಿಂಗ್ ಬೆಂಕಿತಾತ ಸಾನ್ನಿಧ್ಯ ಹಾಗೂ ಶ್ರೀ ಮಂಗಲಸಿಂಗ್ ಬೆಂಕಿತಾತ ಅವರ ನೇತೃತ್ವದಲ್ಲಿ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸುವ ಮೂಲಕ ಶ್ರಾವಣ ಸಂಪನ್ನಗೊಂಡಿತು.

ಸದ್ಗುರು ಸದಾಶಿವ ಬೆಂಕಿತಾತನವರ ಗದ್ದುಗೆ, ಪಾದುಕೆಗೆ ರಮೇಶ ಭಟ್ಟ ಋತ್ವಿಜತ್ವದಲ್ಲಿ ಅನಿರುದ್ದ ಠಾಕೂರ್ ಅವರಿಂದ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ ನಡೆಯಿತು. ನಂತರ ಶ್ರೀ ಮಂಗಲಸಿಂಗ್ ಬೆಂಕಿತಾತ ಮಹಾಮಂಗಳಾರತಿ ನೆರವೇರಿಸಿದರು. ಬಳಿಕ ಆಶೀರ್ವಚನ ನೀಡಿ, ಭಕ್ತರನ್ನು ಅನುಗ್ರಹಿಸಿದರು. ಅಹೋರಾತ್ರಿ ಭಜನೆ ನಡೆಯಿತು.

ಪ್ರಮುಖರಾದ ದೇವೆಂದ್ರ ಅರಣಕಲ್, ಶಂಬು ನಾಯ್ಕಲ್, ನಾಗರಾಜ ಯಾದಗಿರಿ, ಭೀಮು ಪೂಜಾರಿ ಮದರಿ, ಮರಲಿಂಗ ಗಂಗಬೋ, ಬಸವರಾಜ ಮದ್ರಕಿ, ನಿಂಗಣ್ಣ ಹುಳಗೋಳ, ಗೋಪಾಲಸಿಂಗ್ ಶಹಾಪುರ, ಮಹೇಶ ಮಲ್ಲಾ (ಕೆ), ಹಣಮಂತ ಡೊಣಗಾಂವ್, ಪ್ರಕಾಶ ವಿಜಯಪುರ, ಲೋಹಿತ್ ಕಟ್ಟಿ, ಡಾ.ವೆಂಕಟೇಶ, ಚೇತನ ಕೊಲ್ಲೂರಕರ್, ರಾಮಗೋಪಾಲ ಯಮನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net