ಸದೃಢ ಸಮಾಜಕ್ಕೆ ಪೌಷ್ಟಿಕ ಆಹಾರ ಸೇವಿಸಿ

1-1 JYOTI PRAJVALNE DD OTHERS(1)
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಔರಾದ್: ಮಹಿಳೆಯರು ಉತ್ತಮ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮನೆಯಲ್ಲಿ ತಯಾರಿಸಿ ಸೇವಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಂಭುಲಿಂಗ ಹಿರೇಮಠ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ರಿಲಾಯನ್ಸ್ ಫೌಂಡೇಷನ್ ಸಹಯೋಗದಡಿ ಸೋಮವಾರ ವಡಗಾಂವ(ದೇ) ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ್ ಮಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಖನಿಜಾಂಶ ಹೊಂದಿರುವಂಥ ಸೊಪ್ಪು, ತರಕಾರಿ ಜತೆಗೆ ಮೊಳಕೆ ಕಾಳು ಬಳಸಬೇಕು. ತಾಯಿ ಆರೋಗ್ಯವಿದ್ದಾಗಲೇ ಆರೋಗ್ಯವಂತ ಶಿಶು ಜನ್ಮ ನೀಡಲು ಸಾಧ್ಯ ಎಂದರು.

ಅಪೌಷ್ಟಿಕಾಂಶಗಳಿಂದ ಬಳಲುತ್ತಿರುವ ಮಹಿಳೆಯರು, ಹಿರಿಯ ನಾಗರಿಕರನ್ನು ಆರೋಗ್ಯವಂತರನ್ನಾಗಿ ರೂಪಿಸಲು ಇಲಾಖೆಯು ಪೋಷಣ್ ಅಭಿಯಾನ ಯೋಜನೆ ಜಾರಿಗೆ ತಂದಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ರಿಲಾಯನ್ಸ್ ಫೌಂಡೇಷನ್ ಜಿಲ್ಲಾ ಯೋಜನಾಧಿಕಾರಿ ಶಿವಾನಂದ ಮಠಪತಿ ಮಾತನಾಡಿ, ಪೋಷಣ್ ಯೋಜನೆ ಅತ್ಯುತ್ತಮವಿದೆ. ಹಂತ ಹಂತವಾಗಿ ಅಪೌಷ್ಟಿಕತೆ ಮುಕ್ತ ಕರ್ನಾಟಕಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದರು.

ಪ್ರಮುಖರಾದ ರಾಮಚಂದ್ರ ಶೇರಿಕಾರ, ಡಾ.ಸಿದ್ದಾರಡ್ಡಿ ಬಿರಾದಾರ, ರಾಜಶ್ರೀ, ಪ್ರೀತಿ ನಾಸೆ, ಮಹಂತಾಬಾಯಿ, ಸಂಗೀತಾ ಹಿರೇಮಠ, ಸುಶೀಲಾ ಹತ್ತಿ, ಚಿತ್ರಮ್ಮ, ಶಾರದಾಬಾಯಿ, ಸವಿತಾ ಸವಲೆ, ಕನ್ಯಾಕುಮಾರಿ, ಗೌರಮ್ಮ, ರೇಣುಕಾ, ಶಿವು ಮಡಿವಾಳ, ಮಲ್ಲು ಮಾಳಗೆ ಇದ್ದರು.

ಜಯಶ್ರೀ ಖಾನಾಪುರೆ ಸ್ವಾಗತಿಸಿದರು. ಬಾಲಾಜಿ ಮೇತ್ರೆ ನಿರೂಪಣೆ ಮಾಡಿದರು. ಅಂಗನವಾಡಿ ಮಹಿಳೆಯರು ಹಾಗೂ ರಿಲಾಯನ್ಸ್ ಸಂಪನ್ಮೂಲ ವ್ಯಕ್ತಿಗಳು ನಿರ್ಮಿಸಿದ ರಿಲಾಯನ್ಸ್ ಕೈತೋಟ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net