

ಯಾದಗಿರಿ: ದೇಶಕ್ಕೆ ಅನ್ನ ನೀಡುವ ರೈತರನ್ನು, ದೇಶ ಕಾಯುವ ಸೈನಿಕರನ್ನು ಹಾಗೂ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಮಠಾಧೀಶರನ್ನು ಗೌರವಿಸುವ ಮೂಲಕ ಸದೃಢ ಸಮಾಜ ನಿಮರ್ಾಣಕ್ಕೆ ಎಲ್ಲರೂ ಪ್ರಯತ್ನಿಸಬೇಕು ಎಂದು ಶಹಾಪುರ ಏಕದಂಡಗಿ ಮಠದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳು ನುಡಿದರು.
ಭಾನುವಾರ ಸಂಜೆ ಸಮೀಪದ ಸೂಗೂರ (ಎನ್) ಗ್ರಾಮದ ಶ್ರೀ ಭೋಜಲಿಂಗೇಶ್ವರ ಮಠದ 25ನೇ ಜಾತ್ರಾ ಮಹೋತ್ಸವದ ರಥೋತ್ಸವದ ನಂತರ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ಈ ಭರತ ಭೂಮಿ ಶರಣರ, ಸೂಫಿ ಸಂತರ ನಾಡು ಇಲ್ಲಿ ಮೊದಲಿನಿಂದಲೂ ಶರಣರು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಕಾಲ-ಕಾಲಕ್ಕೆ ಪವಾಡಗಳನ್ನು ಮಾಡುವ ಮೂಲಕ ಭಕ್ತರ ಸಂಕಷ್ಟಗಳನ್ನು ದೂರ ಮಾಡಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದರು.
ಇಂದು ಅವರ ಹೆಸರಿನಲ್ಲಿ ನಡೆಯುತ್ತಿರುವ ಜಾತ್ರೆಗಳು, ಧಾಮರ್ಿಕ ಕಾರ್ಯಕ್ರಮಗಳು ಸಮಾಜದಲ್ಲಿ ಸಮಾನತೆ ಮೂಡಿಸಿ, ಸಾಮರಸ್ಯ ವಾತಾವರಣ ನಿರ್ಮಾಣವಾಗಿದೆ. ಭೋಜಲಿಂಗೇಶ್ವರರು ಜನ ಸಾಮಾನ್ಯರಂತೆ ಬದುಕಿ ಆಧ್ಯಾತ್ಮಿಕ ಸಾಧನೆಯಿಂದ ಭಕ್ತರ ಸಮಸ್ಯೆಗಳನ್ನು ದೂರ ಮಾಡಿದ್ದಾರೆ. ಶ್ರೀಮಠವು ಅವರು ಹಾಕಿಕೊಟ್ಟ ಮಾರ್ಗದಲ್ಲಿ ತ್ರೀವಿಧ ದಾಸೋಹವನ್ನು ಮುಂದುವರಿಸಿಕೊಂಡು ನಾಡಿನ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಮಾತನಾಡಿದರು. ಪೀಠಾಧಿಪತಿ ಶ್ರೀ ಹಿರಗಪ್ಪ ತಾತಾ, ಜಮಖಂಡಿಯ ಓಲೇಮಠದ ಪೀಠಾಧಿಪತಿ ಡಾ. ಅಭಿನವ ಕುಮಾರಚನ್ನಬಸವ ಸ್ವಾಮಿಗಳು, ಸಿದ್ದಣ್ಣಗೌಡ ಕಾಡಂನೋರ, ಮಾಣಿಕರೆಡ್ಡಿ ಕುರಕುಂದಿ, ಪಿಎಸ್ಐ ವಿಜಯಕುಮಾರ್ ಭಾವಜೀ, ಮಲ್ಲಣ್ಣ ಹೊಸ್ಮನಿ ಸಿರವಾಳ, ಕೆ. ನರಸಿಂಹರಾವ, ಈರಣ್ಣ ಬಲಕಲ್, ಎಸ್ ಎಸ್ ಜುಗೇರಿ, ವಿಶ್ವನಾಥ ಸ್ವಾಮಿ ನಾಯ್ಕಲ್, ಶಿವನಗೌಡ ಪಾಟೀಲ್ ಆಶನಾಳ ಇದ್ದರು.
ಭೀಮರೆಡ್ಡಿಗೌಡ ಕುರಾಳ ಸ್ವಾಗತಿಸಿದರು. ಶಂಕರಗೌಡ ಸೈದಾಪುರ ನಿರೂಪಿಸಿಮ ಶರಣು ಪೂಜಾರಿ ವಂದಿಸಿದರು.