

ಸದಾನಂದ ಸ್ವಿಟ್ಸ್ ನೂತನ ಫ್ಯಾಕ್ಟರಿ ಔಟ್‌ಲೆಟ್ ಉದ್ಘಾಟನೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಗೋಕಾಕ ಪಟ್ಟಣದ ಶಿವಾಜಿ ವೃತ್ತದ ಎಸ್-೪ ಆಸ್ಪತ್ರೆಯ ವಾಣಿಜ್ಯ ಮಳಿಗೆಯಲ್ಲಿ ಸಿಹಿ ಖ್ಯಾದಕ್ಕೆ ಹೆಸರುವಾಸಿಯಾಗಿರುವ ಸದಾನಂದ ಸ್ವಿಟ್ಸ್ರವರು ನೂತನವಾಗಿ ಆರಂಭಿಸಿರುವ ಫ್ಯಾಕ್ಟರಿ ಔಟ್‌ಲೆಟ್‌ಉದ್ಘಾಟನೆ ಈಚೆಗೆ ನೆರವೇರಿತು.
ಉತ್ತಮ ಆರೋಗ್ಯಕರ ಸಿಹಿ ಖಾದ್ಯಗಳನ್ನು ತಯಾರಿಸಿ ರಾಜ್ಯ,ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿರುವ ಸದಾನಂದ ಸ್ವಿಟ್ಸ್ ,ದಿ.ಶಂಕರ ರಂಗಪ್ಪ ದೇವರಮನಿ ಅವರ ಮಾರ್ಗದರ್ಶನದಲ್ಲಿ ಅವರ ಮಕ್ಕಳು ಮುನ್ನಡೆಸುತ್ತಿದ್ದು, ಸದಾನಂದ ಸ್ವಿಟ್ಸ್ ಇನಷ್ಟು ಹೆಸರು ಮಾಡಲಿ ಎಂದು ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾದ ಗಣ್ಯರು,ಹಿತೈಷಿಗಳು ಶುಭ ಹಾರೈಸಿದರು.
ಮಾಲೀಕರಾದ ಉದಯ ದೇವರಮನಿ,ಸಂಜಯ ದೇವರಮನಿ ಇತರರಿದ್ದರು.