ಸದಾ ಸಕಾರಾತ್ಮಕ ಚಿಂತನೆ ಮಾಡಿ

28ydg02
Published on

ಯಾದಗಿರಿ: ಆಧುನಿಕತೆಯ ಇಂದಿನ ಕಾಲದಲ್ಲಿ ನಮ್ಮ ಜೀವನ ಶೈಲಿ ಬದಲಾಗುತ್ತಿದ್ದು, ನಿತ್ಯವೂ ಒತ್ತಡದಿಂದಲೇ ಬದುಕು ಸಾಗಿಸುತ್ತಿರುವ ಕಾರಣ ಖಿನ್ನತೆಗೆ ಒಳಗಾಗುತ್ತಿದ್ದೇವೆ ಎಂದು ಹತ್ತಿಕುಣಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಕಾರಿ ಡಾ.ಸುನಂದ ಕುದುರಿ ತಿಳಿಸಿದರು.

ನಗರದ ಸರಕಾರಿ ಮಹಿಳಾ ಪದವಿ ಕಾಲೇಜಿನಲ್ಲಿ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯದ ಅರಿವು ಹಾಗೂ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ. ಪ್ರತಿಯೊಬ್ಬರು ನಿತ್ಯ ಪ್ರಾಣಾಯಾಮ, ಯೋಗದಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಮಾನಸಿಕ ಒತ್ತಡ ದೂರವಾಗಬೇಕಾದರೆ ಸದಾ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳು ಸಹ ಒತ್ತಡದಲ್ಲಿರುತ್ತಾರೆ. ಸತತ ಅಧ್ಯಯನ ಹಾಗೂ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯಬೇಕು ಎಂಬ ಕಾರಣದಿಂದ ಕಾಲಕಾಲಕ್ಕೆ ಊಟ, ಉಪಹಾರ ಮಾಡದೆ ಸಣ್ಣ,ಪುಟ್ಟ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಎಂದರು.

ವೈದ್ಯಾಕಾರಿ ಡಾ.ದೀಪಾ ರಾಠೋಡ ಮಾತನಾಡಿ, ವಿಶೇಷವಾಗಿ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಡಿಸ್ ಮೆನೋಲಿಯ (ಹೊಟ್ಟೆ ನೋವು)ಗಳಿಗೆ ಮನೆಯಲ್ಲಿಯೇ ದಾಲ್ಚಿನ್ನಿ ಚಕ್ಕೆಯ ಕಷಾಯ ಕುಡಿಯಬೇಕು. ಜೀರಿಗೆ ಪುಡಿ ಮಾಡಿ ನೀರಿನಲ್ಲಿ ಸೇರಿಸಿ ಕುಡಿಯುವುದರಿಂದ ಹಲವು ರೀತಿಯ ಉಪಯೋಗಗಳಾಗುತ್ತವೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಸವರ್ೋದಯ ಶಿವಪುತ್ರ, ಪ್ರಾಧ್ಯಾಪಕ ಶ್ರೀನಿವಾಸ್ ದೊಡ್ಡಮನಿ, ಆಯುಷ್ ಇಲಾಖೆಯ ಮಹೇಶರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net