ಸದಸ್ಯರನ್ನು ಹೈಜಾಕ್ ಮಾಡಿಲ್ಲ - ಸತೀಶ ಜಾರಕಿಹೊಳಿ

satish jarakiholi
Published on

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ಆಗುತ್ತಿರುವ ಬೆಳವಣಿಗೆಗಳಿಗೆ ನಾವು ಕಾರಣವಲ್ಲ.

ಯಾವುದೇ ಸದಸ್ಯರನ್ನು ನಾವು ಹೈಜಾಕ್ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ನಾಲ್ಕೈದು ದಿನಗಳಿಂದ ಹುಕ್ಕೇರಿ ತಾಲೂಕಿನಲ್ಲಿ ಆಗುತ್ತಿರುವ ಬೆಳವಣಿಗೆಗೆ ಅಲ್ಲಿನ ನಾಯಕರೇ ಕಾರಣ.

ಯಾರದ್ದೋ ಮಾತು ಕೇಳಿ ನಮ್ಮನ್ನು ಪ್ರಶ್ನಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ವಾಸ್ತವ ತಿಳಿದು ಮಾತನಾಡಬೇಕು. ಹುಕ್ಕೇರಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಈ ಘಟನೆಗಳ ಹಿಂದೆ ನಿರ್ಮಾಪಕ, ನಿರ್ದೇಶಕರು ಬೇರೆಯವರೇ ಇದ್ದಾರೆ. ಸಮಯ ಬಂದಾಗ ಅವರು ಯಾರೆಂಬುದು ಗೊತ್ತಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net