

ಬೈಲಹೊಂಗಲ: ಸಂದ ಸದಸ್ಯರನ್ನು ಆರ್ಥಿಕವಾಗಿ ಸಬಲರಾಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ನಯಾನಗರ&ಚಿಕ್ಕಮುಳಕೂರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಧ್ಯ ಮುದಕಪ್ಪ ತೋಟಗಿ ಹೇಳಿದರು.
ತಾಲೂಕಿನ ನಯಾನಗರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 20ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಸ್ಥೆಯು 3 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 430 ಸದಸ್ಯರ ಬಲ ಹೊಂದಿದೆ. 2.36 ಕೋಟಿ ರೂ. ಸಾಲ, 1.85 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ಸಂದ ಉಪಾಧ್ಯ ಚಂದ್ರಪ್ಪ ಉಜ್ಜಿನಕೊಪ್ಪ, ನಿರ್ದೇಶಕರಾದ ಜಗದೀಶ ಅಡಕಿ, ಭೀಮಪ್ಪ ಕರಿದೇಮಣ್ಣವರ, ಬಶೆಟ್ಟೆಪ್ಪ ಅಡಕಿ, ಬಸಪ್ಪ ತೋಟಗಿ, ಬಸನಗೌಡ ಸಂಕನ್ನವರ, ಪಾರವ್ವ ತೋಟಗಿ, ಸುಮಿತ್ರಾ ಹಂಪಿಹೊಳಿ, ಈರಪ್ಪ ಸಂಗೊಳ್ಳಿ, ಹನುಮಂತಪ್ಪ ಕಾಳೆ, ಅಡಿವೆಪ್ಪ ದಾಸರ, ಬ್ಯಾಂಕ್ ನಿರೀಕ ರಾಜಶೇಖರ ಗೂಳಣ್ಣವರ, ಸಲಹಾ ಸಮಿತಿಯ ಬಾಲಪ್ಪ ಉಳ್ಳಿಗೇರಿ, ವೆಂಕಟೇಶ ಪೂಜೇರ, ಮಲ್ಲನಗೌಡ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ದುಂಡಪ್ಪ ಕಾಲಗಗ್ಗರಿ ಇತರರು ಇದ್ದರು.