

ಬೋರಗಾಂವ: ಸದಲಗಾ ಪಟ್ಟಣದ ರತ್ನಪ್ಪಣ್ಣ ಕುಂಬಾರ ವೃತ್ತದಿಂದ ಶಿವಾಜಿ ವೃತ್ತದವರೆಗಿನ ರಸ್ತೆ ಅಗಲೀಕರಣ, ಡಾಂಬರೀಕರಣ ಹಾಗೂ ಫುಟ್‌ಪಾತ್ ನಿರ್ಮಾಣಕ್ಕಾಗಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ವಿಪ ಸದಸ್ಯ ಪ್ರಕಾಶ ಹುಕ್ಕೇರಿ ಮಾಹಿತಿ ನೀಡಿದರು.ಸಮೀಪದ ಸದಲಗಾ ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ರತ್ನಪ್ಪಣ್ಣ ಕುಂಬಾರ ವೃತ್ತದಿಂದ ಬಸ್ ನಿಲ್ದಾಣವರೆಗಿನ ರಸ್ತೆ ಅಗಲೀಕರಣದ ಬಹುದಿನದ ಬೇಡಿಕೆ ಈಡೇರಿದೆ. ಈ ರಸ್ತೆ ಮಧ್ಯೆ ಅನೇಕ ಸಲ ಅಪಘಾತಗಳು ಸಂಭವಿಸಿವೆ. ಲೋಕೋಪಯೋಗಿ ಇಲಾಖೆಯಿಂದ ಕಪ್ಪು ಚುಕ್ಕೆ ಸ್ಥಳ ಎಂದು ಗುರುತಿಸಲಾಗಿತ್ತು.
ನಾಗರಿಕರ ಬೇಡಿಕೆಗೆ ಸ್ಪಂದಿಸಿ ಕಪ್ಪು ಸ್ಥಳ ಅಭಿವೃದ್ಧಿಯಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನಡಿ ರಸ್ತೆ ಅಗಲೀಕರಣ ಹಾಗೂ ಸುಧಾರಣೆ, ಫುಟ್‌ಪಾತ್ ನಿರ್ಮಾಣಕ್ಕೆ 5 ಕೋಟಿ ರೂ.ಅನುದಾನ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು. ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ರಸ್ತೆ ಅಭಿವೃದ್ಧಿಯಲ್ಲಿ ಸದಲಗಾ-ಚಿಕ್ಕೋಡಿ ಮತಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಮಾಡಲಾಗುತ್ತಿದೆ. ನಾನು ಹಾಗೂ ವಿ.ಪಂ ಸದಸ್ಯ ಪ್ರಕಾಶ ಹುಕ್ಕೇರಿ ಅವರು ಸದಲಗಾ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇವೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಗುಂಡಕಲ್ಲೆ, ಜಿಪಂ ಮಾಜಿ ಸದಸ್ಯ ಸುದರ್ಶನ ಖೋತ, ಅಣ್ಣಾಸಾಬ ಹವಲೆ, ನಗರಸಭೆ ಉಪಾಧ್ಯಕ್ಷ ಸುಹಾಸ ವಾಳಕೆ, ಪಿರಗೌಡ ಪಾಟೀಲ, ಉದಯ ಬದನಿಕಾಯಿ, ಸುಕುಮಾರ ಉಗಾರೆ, ಕಲ್ಲಪ್ಪ ಪಡಲಾಳೆ, ಸಂತೋಷ ನವಲೆ, ಕುಮಾರ ಮಾನೆ, ದಿಲೀಪ ಅನೂರೆ, ಪ್ರಕಾಶ ಅನೂರೆ, ಚಂದ್ರಕಾಂತ ಪಾಟೀಲ, ಮಹಾವೀರ ಉದಗಾಂವೆ, ಮುಸ್ಸಾ ಅಫರಾಜ, ಮೆಹಬೂಬ್ ಕಾಲೆ, ಸುನೀಲ ಪಾಟೀಲ, ಸಂಜಯ ಕೋರೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಬಿ.ಬಿ.ಬೇಡಕಿಹಾಳೆ, ಸಂಜಯ ದೇಸಾಯಿ, ಅಜರುದ್ದೀನ್ ಶೇಖಜಿ ಇತರರು ಇದ್ದರು.