ಸದಲಗಾ ಕ್ಷೇತ್ರ ಅಭಿವೃದ್ಧಿಗೆ ಯತ್ನ

24CHIKODIGRAMEEN1
ಯಕ್ಸಂಬಾದಲ್ಲಿ ಶಾಸಕ ಗಣೇಶ ಹುಕ್ಕೇರಿಗೆ ಹಲವು ಗಣ್ಯರು ಅಭಿನಂದಿಸಿದರು. ಸುನೀಲ ಸಪ್ತಸಾಗರೆ, ಕಿರಣ ಮಾಳಿ, ರಾಜು ಖೋತ ಇದ್ದರು.
Published on

ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ಸದಲಗಾ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸದಾ ಶ್ರಮಿಸುವುದಾಗಿ ಶಾಸಕ ಗಣೇಶ ಹುಕ್ಕೇರಿ ಹೇಳಿದರು.

ಯಕ್ಸಂಬಾ ಪಟ್ಟಣದ ಹಾಲಸಿಧ್ಧನಾಥ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಸರ್ಕಾರದ ಹಲವು ಯೋಜನೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವುದಾಗಿ ಹೇಳಿದರು.

ಅಭಿನಂದನಾ ಸಮಾರಂಭವನ್ನು ಉದ್ಧೇಶಿಸಿ ಹಲವು ಕಾರ್ಯಕರ್ತರು ಮಾತನಾಡಿದರು. ಮಲ್ಲಿಕಾರ್ಜುನ ಪಾಟೀಲ, ರಾಜು ಪಾಟೀಲ, ಗುಲಾಬಹುಸೇನ ಬಾಗವಾನ, ಮಾರುತಿ ಮಾನೆ, ಕಿರಣ ಮಾಳಿ, ರಾಜೇಂದ್ರ ಕರಾಳೆ, ಸುನೀಲ ಸಪ್ತಸಾಗರೆ, ವಿಠ್ಠಲ ನಾಯಿಕ, ರವೀಂದ್ರ ಮಾನೆ, ಜಮ್ಮನಶಾ ಮಕಾನದಾರ, ಚಿದಾನಂದ ಬೆಳ್ಳೆ, ಶಿವಗೌಡಾ ಬಾವಚೆ, ಉಮೇಶ ಸಾತ್ವರ, ಅಂಕುಶ ಖೊತ, ರವೀಂದ್ರ ಖೊತ, ಸುಜಾತಾ ಚಿತಳೆ, ಸಂಗೀತಾ ಪವಾರ, ಶಾನಕ್ಕಾ ರಾಂಗೋಳೆ, ಸೆಹೀದಾ ಮುಲ್ಲಾ, ಪ್ರೇಮಾ ಮಾಳಗೆ, ರಾಜಶ್ರೀ ಮಗದುಮ್ಮ, ರಾಜು ಖೋತ, ಸುರೇಶ ಮಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net