ಸದಲಗಾ ಅರ್ಬನ್ ಸೌಹಾರ್ದ ಬ್ಯಾಂಕ್ ಶಾಖೆ ಲೋಕಾರ್ಪಣೆ

4CHIKODIGRAMEEN1
Published on

ಚಿಕ್ಕೋಡಿ ಗ್ರಾಮೀಣ: ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿ ಶ್ರಮದಿಂದ ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ ಬೇಡಕಿಹಾಳ ಗ್ರಾಮದಲ್ಲಿ ನೂತನ ಶಾಖೆ ಪ್ರಾರಂಭಿಸಿದೆ ಎಂದು ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಅಧ್ಯಕ್ಷ ಪ್ರಕಾಶ ಪಾಟೀಲ ಹೇಳಿದರು.

ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸದಲಗಾ ಅರ್ಬನ್ ಸೌಹಾರ್ದ ಸಹಕಾರಿ ಬ್ಯಾಂಕ್ 10ನೇ ಶಾಖೆ ಉದ್ಘಾಟನೆಯ ನೇತೃತ್ವ ವಹಿಸಿ ಮಾತನಾಡಿದರು. ಶಾಖೆ ಉದ್ಘಾಟಿಸಿ ಬೆಳಗಾವಿ ಪ್ರಾಂತ ಉಪನಿರ್ದೇಶಕ ರವೀಂದ್ರ ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಹಕಾರಿ ಬ್ಯಾಂಕ್ ಕಾರ್ಯನಿರ್ವಹಿಸುವುದು ಕಠಿಣವಾಗಿದೆ. ಗ್ರಾಹಕರು ಕಡಿಮೆ ಬಡ್ಡಿ ದರಕ್ಕಾಗಿ ಸೆಕ್ಯೂರಿಟಿ ಸಾಲ ಪಡೆಯಬೇಕು. ಇದರಿಂದಾಗಿ ಬ್ಯಾಂಕ್‌ಗೆ ಭದ್ರತೆ ಮತ್ತು ಸಾಲಗಾರರಿಗೆ ಬಡ್ಡಿ ಹೊರೆ ಬೀಳದು ಎಂದು ತಿಳಿಸಿದರು.

ಲಠ್ಠೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಇಂದ್ರಜಿತ್ ಪಾಟೀಲ ಲಾಕರ್ ಹಾಗೂ ಶಾಖೆ ಪೂಜೆ ನೆರವೇರಿಸಿದರು. ಉಪಾಧ್ಯಕ್ಷ ಉದಯಕುಮಾರ್ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಸುನೀಲ ಪಾರಿಸಖೋತ, ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net