

ಬಾಗಲಕೋಟೆ: ನಮ್ಮ ಬದುಕಿನ ಬಹುಮುಖ್ಯ ಜೀವನಾಡಿಯಾಗಿರುವ ಕೃಷ್ಣೆಯ ಬಗ್ಗೆ ಯಾವುದೇ ಸರ್ಕಾರವಿರಲಿ ಪ್ರಶ್ನೆ ಮಾಡುತ್ತೇನೆ. ಯೋಜನೆ ಪೂರ್ಣಗೊಳ್ಳಬೇಕಾದರೇ ಸದನದಲ್ಲಿ ಪಕ್ಷ, ಜಾತಿ ಮರೆತು ಜಂಟಿಯಾಗಿ ಧ್ವನಿ ಎತ್ತೋಣ. ಮೊದಲ ದಿನವೇ ಚರ್ಚೆ ಆರಂಭವಾಗಬೇಕು. ಮುಂದಿನ ಬಜೆಟ್‌ನಲ್ಲಿ ೨೫ ಸಾವಿರ ಕೋಟಿ ರೂ. ನೀಡುವಂತೆ ಸಿಎಂ ಸಿದ್ದರಾಮಯ್ಯ ಮನೆ ಎದುರು ಧರಣಿ ನಡೆಸೋಣ ಎಂದು ಶಾಸಕ, ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.
ನಗರದ ಡಿಸಿ ಕಚೇರಿ ಎದುರು ಶನಿವಾರ ಕೃಷ್ಣಾ ಮೇಲ್ದಂಡೆ ಯೋಜನೆ ಬಾಽತ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಅವರು, ನಮ್ಮದೆ ಸರ್ಕಾರ ಇದ್ದಾಗಲು ಪ್ರಶ್ನಿಸಿ, ಹೋರಾಟ ಮಾಡಿದ್ದೇನೆ. ಈಗಲು ಯೋಜನೆಗೆ ಒಳಪಡುವ ಆಡಳಿತ ಪಕ್ಷ, ವಿರೋಧ ಪಕ್ಷದ ಶಾಸಕರು ಧ್ವನಿಗೂಡಿಸಬೇಕು. ಹೋರಾಟ ತೀವ್ರಗೊಳಿಸಿ ಏಳು ಜಿಲ್ಲೆಗಳ ಬಂದ್‌ಗೆ ಏಕಕಾಲಕ್ಕೆ ಕರೆಯಬೇಕು. ದ.ಕ ಭಾಗದ ಜನಪ್ರತಿನಿಽಗಳಂತೆ ಉ-ಕ ಭಾಗದವರು ಗಟ್ಟಿತನ ಪ್ರದರ್ಶಿಸಬೇಕು. ಸ್ವಾರ್ಥ ಹಿತಾಸಕ್ತಿ ಬಿಟ್ಟರೇ ಹೋರಾಟ ದಡ ಮುಡುತ್ತದೆ. ಜನರಿಗೆ ನ್ಯಾಯ ದೊರೆಯುತ್ತದೆ ಎಂದರು.
ಮೊದಲ ದಿನವೇ ನನ್ನ ಕೂಗು ಮೊಳಗಲಿದೆ. ಜನರು ತಮ್ಮ ಶಾಸಕರಿಗೂ ಧ್ವನಿಗೂಡಿಸಲು ಟೈಟ್ ಮಾಡಿ. ನೀರು ಸಿಕ್ಕರೇ ನಾವು ಉದ್ದಾರ ಆಗುತ್ತೇವೆ. ಇಲ್ಲ ಅಂದ್ರ ಇಲ್ಲ. ೨೦೧೮ ಸಂದರ್ಭರಲ್ಲಿ ಕುಮಾರಸ್ವಾಮಿ ಸರ್ಕಾರ ಕೆಳಗಿಸಲು ೧೭ ಶಾಸಕರು ಬಿಜೆಪಿ ಬರುತ್ತಾರೆ. ತಾವೆಲ್ಲ ಮಂತ್ರಿ ಸ್ಥಾನ ತ್ಯಾಗ ಮಾಡಬೇಕು ಅಂತ ದೆಹಲಿಗೆ ಕರೆಯಿಸಿ ಯಡಿಯೂರಪ್ಪ ಹೇಳಿದರು. ನಾನು ಸುರಪುರ ಶಾಸಕ ರಾಜುಗೌಡ, ವೀರಣ್ಣ ಚರಂತಿಮಠ ಎಲ್ಲದಕ್ಕೂ ಸೈ ಎಂದೇವು. ಆದರೇ ಕೃಷ್ಣಾ ಯೋಜನೆಗೆ ೨೫ ಸಾವಿರ ಕೋಟಿ ರೂ. ಕೊಡಬೇಕು ಕಂಡಿಷನ್ ಹಾಕಿದೇವು. ಯಡಿಯೂರಪ್ಪ ಸರ್ಕಾರ ಬಂದಿತು. ಬಜೆಟ್ ಘೋಷಣೆ ಆಯ್ತು, ಒಂದು ರೂ. ಅನುದಾನ ಇರಲಿಲ್ಲ. ತಕ್ಷಣಕ್ಕೆ ಪ್ರಶ್ನೆ ಮಾಡಿದೇ, ನಮ್ಮ ಕೋಪ ಅರಿತು ಕಾರಜೋಳ ಯಡಿಯೂರಪ್ಪಗೆ ಹೇಳಿ ಮರುದಿನ ಸದನದಲ್ಲಿ ೧೦ ಸಾವಿರ ಕೋಟಿ ರೂ. ಘೋಷಣೆ ಮಾಡಿದರು. ಪ್ರಶ್ನೆ, ಹೋರಾಟ ಮಾಡದೇ ಬಿಡಿಗಾಸು ಬರುವದಿಲ್ಲ ಅಂತ ಖಾರವಾಗಿ ತಿಳಿಸಿದರು.
ಹೋರಾಟ ಸಮಿತಿ ಗೌರವ ಅಧ್ಯಕ್ಷ ಅಜಯಕುಮಾರ ಸರನಾಯಕ, ಅಧ್ಯಕ್ಷ ಅದೃಶಪ್ಪ ದೇಸಾಯಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಮಾಜಿ ಶಾಸಕರಾದ ಶ್ರೀಕಾಂತ ಕುಲಕರ್ಣಿ, ಆನಂದ ನ್ಯಾಮಗೌಡ, ಎಂ.ಎಸ್.ದಡ್ಡೇನವರ, ಮೋಹನ ಜಾಧವ, ಪ್ರಕಾಶ ಅಂತರಗೊAಡ ಸೇರಿದಂತೆ ಇತರರು ಇದ್ದರು.