

ಸಿದ್ದಾಪುರ: ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಶರನ್ನವರಾತ್ರಿ ಹಾಗೂ ಧಾರ್ವಿುಕ ಸಾಂಸ್ಕೃತಿಕ ಉತ್ಸವ ಅ. 2ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದರು.
ಪಟ್ಟಣದ ಶಂಕರಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಅ. 2ರಂದು ಮಹಾಗಣಪತಿ ಮತ್ತು ಶಾರದಾ ಅಮ್ಮನವರ ಸನ್ನಿಧಿಯಲ್ಲಿ ಫಲಪಂಚಾಮೃತ ಅಭಿಷೇಕ, ಸರ್ವಾಲಂಕಾರ ಪೂಜೆ, 3ರಂದು ಶರನ್ನವರಾತ್ರಿ ಆರಂಭ, ಶಾರದಾ ಸನ್ನಿಧಿಯಲ್ಲಿ ಸಪ್ತಶತೀ ಪಾರಾಯಣ, ಗಣಪತಿ ಸನ್ನಿಧಿಯಲ್ಲಿ ಉಪನಿಷತ್ ಪಾರಾಯಣ ಪ್ರಾರಂಭ. ಅಥರ್ವಶೀರ್ಷ ಹವನ, 4ರಂದು ಲಲಿತಾಸಹಸ್ರನಾಮ, 5ರಂದು ರುದ್ರಹವನ, 6ರಂದು ಶ್ರೀಸೂಕ್ತ-ಪುರುಷಸೂಕ್ತಹವನ, 7ರಂದು ಚಂಡೀಹವನ, 8ರಂದು ದುರ್ಗಾಹವನ, 9ರಂದು ಶಾರದಾ ಪೂಜೆ, 10ರಂದು ದುರ್ಗಾಷ್ಟಮೀ-ದುರ್ಗಾಪೂಜೆ, 11ರಂದು ಮಹಾನವಮಿ, 12ರಂದು ವಿಜಯದಶಮಿ - ಶ್ರೀ ದೇವರ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಶರನ್ನವರಾತ್ರಿ ಪ್ರಯುಕ್ತ ಅ. 6, 7,8,9 ಹಾಗೂ 12ರಂದು ಪ್ರತಿ ದಿನ ಸಂಜೆ 6.30ರಿಂದ ಸಂಸ್ಕೃತಿ ಸಂಪದೋತ್ಸವ ನಡೆಯಲಿದೆ.
ಅ. 6ರಂದು ಒಡ್ಡೋಲಗ ರಂಗಪರ್ಯಟನ ಅವರಿಂದ ಬಹುಮುಖಿ ನಾಟಕ, 7ರಂದು ಸಂಗೀತ ಗಾನಯಾನ ನಡೆಯಲಿದೆ. ಗಾಯಕರಾಗಿ ವಿಭಾ ಹೆಗಡೆ ಯಲ್ಲಾಪುರ(ಪುಣೆ), ಸುಧೀರ ಬೇಂಗ್ರೆ ಸಿದ್ದಾಪುರ, ತಬಲಾದಲ್ಲಿ ಗಣೇಶ ಭಾಗವತ್ ಗುಂಟಕಲ್ ಹಾಗೂ ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ್ ಸಹಕರಿಸುವರು. 8 ರಂದು ರಂಗಸೌಗಂಧ ಸಿದ್ದಾಪುರ ಅವರಿಂದ ‘ರಕ್ತ ರಾತ್ರಿ’ ನಾಟಕ, 9ರಂದು ಶಾಸ್ತ್ರೀಯ ಹಾಗೂ ಲಘು ಸಂಗೀತ ಡಾ.ಅಶೋಕ ಹುಗ್ಗಣ್ಣನವರ ಹಾಗೂ ರೇಷ್ಮಾ ಭಟ್ಟ ಕುಮಟಾ ಅವರಿಂದ. ತಬಲಾದಲ್ಲಿ ಪಂ.ಅಲ್ಲಮಪ್ರಭು ಕಡಕೋಳ ಹಾಗೂ ಪಂ.ಎನ್.ಜಿ.ಹೆಗಡೆ ಕಪ್ಪಿಕೆರೆ, ಸಂವಾದಿನಿಯಲ್ಲಿ ಪ್ರಕಾಶ ಹೆಗಡೆ ಯಡಳ್ಳಿ ಸಹಕರಿಸುವರು. ಅ. 12ರಂದು ಬಡಗಿನ ಖ್ಯಾತ ಕಲಾವಿದರಿಂದ ನಳ-ದಮಯಂತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದರು.
ಗಣಪತಿ ಹಿತ್ಲಕೈ, ಶ್ರೀಕಾಂತ ಹೆಗಡೆ, ಜಯರಾಮ ಭಟ್ಟ, ನಾರಾಯಣ ಹೆಗಡೆ ಕಲ್ಲಾರೆಮನೆ ಇದ್ದರು.