ಸತ್ಸಂಗದಿಂದ ಜ್ಞಾನ ಸಂಪಾದಿಸಲಿ

10ATHANIGRAMIN3
Published on

ಅಥಣಿ ಗ್ರಾಮೀಣ: ವಿದ್ಯೆ ಕಲಿಸಿದ ಗುರು, ತಂದೆ-ತಾಯಿಗಳ ಆರೈಕೆ ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ಕಾಡಸಿದ್ಧೇಶ್ವರಮಠದ ಗುರುಶಾಂತಲಿಂಗ ಶಿವಾಚಾರ್ಯರು ಹೇಳಿದರು.

ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಚರಮೂರ್ತಿ ದೇವಾಲಯದಲ್ಲಿ ಗುರುವಾರ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಗುರು ಇಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ. ಸೇವೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸತ್ಸಂಗದಲ್ಲಿ ಪಾಲ್ಗೊಂಡು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂದರು.

ಪಂಚಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಸನಾತನ ಸಂಸ್ಕೃತಿಯಲ್ಲಿ ಗುರುವಿನಷ್ಟು ದೊಡ್ಡ ಹಾಗೂ ಅಪರಿಮಿತ ಶಬ್ಧ ಮತ್ತೊಂದಿಲ್ಲ ಎಂದರು. ಸಾಗರ ಮಠದ, ಅಪ್ಪಾಸಾಹೇಬ ಶರಣರು, ಸಿದರಾಯ ಕೋಹಳ್ಳಿ, ಪರಸಪ್ಪ ಅಥಣಿ, ಭೀಮು ಮಿರ್ಜಿ, ಶಿವಕುಮಾರ ಹಿರೇಮಠ, ಈರಗೌಡ ಪಾಟೀಲ, ಬಸವರಾಜ ಮಾಳಿ, ಶೇಖರ ಕೋಳಿ, ತಿಪ್ಪಣ್ಣ ಯಮಗಾರ, ಶಂಕರ ಮಾಳಿ, ಲಕ್ಷ್ಮಣ ಕೆಂಚಣ್ಣವರ, ಸಾಬು ಸಾರಾವರಿ, ಅರುಣ ಕೋಹಳ್ಳಿ, ಅಣ್ಣಾಸಾಹೇಬ ಪಾಟೀಲ, ವಿಠ್ಠಲ ಶೇಗಾಂವಿ, ಶಂಕರಯ್ಯ ಮಠಪತಿ, ಗೋವಿಂದ ಮಾಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net