ಸತ್ಸಂಗದಿಂದ ಅಂತರಂಗ ಶುದ್ಧಿ

Prashad Nilaya
Published on

ಬೀದರ್: ಅಂತರಂಗ ಮನಸ್ಸು ಶುದ್ಧೀಕರಣಗೊಳ್ಳಬೇಕಾದರೆ ಶರಣರ ಮತ್ತು ಸಂತರ ಸತ್ಸಂಗದಿಂದ ಮಾತ್ರ ಸಾಧ್ಯ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಇತ್ತೀಚೆಗೆ ಜರುಗಿದ 125ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಮಾತನಾಡಿ, ಅಂತರಂಗ ಭಾವನೆ ಶುದ್ಧವಾಗಿದ್ದಾಗ ಮಾತ್ರ ದೇವರ ಪ್ರೀತಿಗೆ ಪಾತ್ರರಾಗಬಹುದು. ಜೀವನದಲ್ಲಿ ಸುಖ, ದುಃಖಗಳನ್ನು ಸಮಾನ ದೃಷ್ಟಿಯಿಂದ ಸಮಾಧಾನದಿಂದ ದೇವರಿಗೆ ಅರ್ಪಿಸಿದಾಗ ಸತ್ಯದ ಬೆಳಕು ಕಾಣಬಹುದು ಎಂದರು.

ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ತತ್ವಗಳನ್ನು ಜನರ ಮನೆ-ಮನಕ್ಕೆ ಮುಟ್ಟಿಸುವ ಕಾರ್ಯ ಮತ್ತು ಬಡ ಮಕ್ಕಳಿಗೆ ಶಿಕ್ಷಣ, ಪ್ರಸಾದ ವ್ಯವಸ್ಥೆ ಮಾಡುತ್ತಿರುವ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಸೇವೆ ಶ್ಲಾಘನೀಯ. ನಡೆ-ನುಡಿ ಒಂದಾಗಿಸಿಕೊಂಡ ಪೂಜ್ಯರ ಮಾತಿನಲ್ಲಿ ಮಹಾ ಶಕ್ತಿ ಅಡಗಿದೆ ಎಂದು ಹೇಳಿದರು.

ಕಲಬುರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ ಮುಖ್ಯಸ್ಥ ಡಾ.ಕಲ್ಯಾಣರಾವ ಪಾಟೀಲ್ ಉಪನ್ಯಾಸ ನೀಡಿದರು. ಈ ವೇಳೆ ಮಹಿಳಾ ಸಹಕಾರ ಮಹಾಮಂಡಳ ನೂತನ ಅಧ್ಯಕ್ಷೆ ಶಕುಂತಲಾ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಎಪಿಎಂಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ಮಹೇಶ ಬಿರಾದಾರ, ದಾಸೋಹಿ ಜಯಶ್ರೀ ವಿಜಯಕುಮಾರ ಪಾಟೀಲ್ ಯರನಳ್ಳಿ, ಕಮಳಾಬಾಯಿ ಪಾಟೀಲ್, ಡಾ. ಸಚಿನಕುಮಾರ ಅವರನ್ನು ಸನ್ಮಾನಿಸಲಾಯಿತು.

ಪ್ರೊ. ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗ ಸ್ವಾಮೀಜಿ, ನವಲಿಂಗ ಪಾಟೀಲ್, ಮಲ್ಲಿಕಾರ್ಜುನ ಹುಡಗೆ, ಶ್ರೀಕಾಂತ ಬಿರಾದಾರ, ಗುರುನಾಥ ಬಿರಾದಾರ, ಅನೀಲಕುಮಾರ ದೇಶಮುಖ, ಡಾ.ರಾಮಚಂದ್ರ ಗಣಾಪುರಕರ್, ಡಾ.ರಘುಶಂಕ ಭಾತಂಬ್ರಾ, ಶಂಕ್ರೆಪ್ಪ ಚಲವಾ, ಶ್ರೀಕಾಂತ ಸ್ವಾಮಿ ಇದ್ದರು. ಉಮಾಕಾಂತ ಮೀಸೆ ನಿರೂಪಣೆ ಮಾಡಿದರು. ಶಿವಕುಮಾರ ಭಾಲ್ಕೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net