ಸತ್ಸAಗದಿAದ ಮನಸ್ಸಿಗೆ ಶಾಂತಿ, ನೆಮ್ಮದಿ

hbd1
Published on

ಚಿಟಗುಪ್ಪ: ಸತ್ಸಂಗ, ಧರ್ಮಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜತೆಗೆ ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ಯಾದಗಿರ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕುಮಾರಸ್ವಾಮಿ ನುಡಿದರು.


ಕರಕನಳ್ಳಿ ಗ್ರಾಮದಲ್ಲಿ ಬುಧವಾರ ಹಾಲುಮತದ ಶ್ರೀ ಮಹಾಶಿವಯೋಗಿ ಗುಂಡಪ್ಪ ಮುತ್ಯಾ ಅವರ 29ನೇ ಪುಣ್ಯಸ್ಮರಣೆ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಇಂದಿನ ಆಧುನಿಕತೆ ಜಂಜಾಟದಲ್ಲಿ ಕೇವಲ ಹಣ, ಆಸ್ತಿ ಗಳಿಸುವುದರಲ್ಲಿ ಜೀವನ ವ್ಯರ್ಥ ಮಾಡಿಕೊಳ್ಳುತ್ತಿz್ದೆÃವೆ. ಸ್ವಲ್ಪ ಮಟ್ಟಿಗಾದರೂ ಸಮಯ ಉಳಿಸಿಕೊಂಡು ಧರ್ಮ ಕಾರ್ಯದೊಂದಿಗೆ ಸತ್ಸಂಗ, ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿಯೂ ಉತ್ತಮ ಸಂಸ್ಕಾರ ಮೂಡಿಸಲು ಸಾಧ್ಯವಾಗುತ್ತದೆ. ಈ ಭಾಗದಲ್ಲಿ ನಡೆದಾಡಿದ ಶಿವಯೋಗಿ ಶ್ರೀ ಗುಂಡಪ್ಪ ಮುತ್ಯಾ ಜನರಲ್ಲಿ ಧರ್ಮ ಜಾಗೃತಿ ಮೂಡಿಸಿರುವ ಅವರ ಸೇವೆ ಅಪಾರ. ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.


ಸಾನ್ನಿಧ್ಯ ವಹಿಸಿದ್ದ ತಿಂಥಣಿ ಬ್ರಿಜ್‌ನ ಕನಕಗುರುಪೀಠದ ಶ್ರೀ ಸಿದ್ಧರಾಮನಂದ ಪೂರಿ ಸ್ವಾಮಿ ಮಾತನಾಡಿ, ಕರಕನಳ್ಳಿ ಗ್ರಾಮ ಶ್ರೀ ಗುರು ಗಂಗಾಧರ ಬಕ್ಕಪ್ರಭುಗಳ ಪುಣ್ಯ ಕ್ಷೇತ್ರ. ಇಂತಹ ಪವಿತ್ರ ಸ್ಥಳದಲ್ಲಿ ಶ್ರೀ ಶಿವಯೋಗಿ ಗುಂಡಪ್ಪ ಮುತ್ತಾನವರು ಸಹ ಜಾತಿ ಮತ ಎನ್ನದೇ ಎಲ್ಲರಿಗೂ ಧರ್ಮ ಉಪದೇಶ ಮಾಡಿ ಸನ್ಮಾರ್ಗದಲ್ಲಿ ನಡೆಯುವುಂತೆ ಮಾಡಿz್ದÁರೆ. ಸುಮಾರು 29 ವರ್ಷಗಳಿಂದ ಅವರ ಪುಣ್ಯಸ್ಮರಣೋತ್ಸವ ವೈವಿಧ್ಯಮಯವಾಗಿ ಆಚರಿಸಿಕೊಂಡು ಬರುತ್ತಿರುವುದು ಹಾಗೂ ಇಲ್ಲಿ ಸೇರಿರುವ ಅಪಾರ ಭಕ್ತ ಸಮೂಹವೇ ಸಾಕ್ಷಿಯಾಗಿದೆ ಎಂದರು.


ತೆಲಂಗಾಣದ ಧನಾಶ್ರೀ ಹಿರೇಮಠದ ಶ್ರೀ ವೀರೇಶ್ವರ ಶಿವಾಚಾರ್ಯ ಮಾತನಾಡಿ, ಮುತ್ಯಾನವರ ಪುಣ್ಯಸ್ಮರಣೆ ನಿಮಿತ್ತ ಶ್ರೀ ರಾಜಪ್ಪ ಮುತ್ಯಾ ಅವರ ನೇತೃತ್ವದಲ್ಲಿ ಧಾರ್ಮಿಕತೆಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಭಕ್ತರಿಗೆ e್ಞÁನ, ಅನ್ನದಾಸೋಹ ಮಾಡುತ್ತಿರುವುದು ಸಂತಸ ಮೂಡಿಸಿದೆ ಎಂದರು.


ಗುಂಡಪ್ಪ ಮುತ್ಯಾ ಟ್ರ¸್ಟï ಅಧ್ಯP್ಷÀ ಶ್ರೀ ರಾಜಪ್ಪ ಮುತ್ಯಾ ಅಧ್ಯP್ಷÀತೆ ವಹಿಸಿ ಮಾತನಾಡಿದರು.
ಬೇಮಳಖೇಡದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಗೌರದ ಶ್ರೀ ಬೀರಪ್ಪ ಮುತ್ಯಾ, ಗ್ರಾಪಂ ಅಧ್ಯಕ್ಷೆ ನೀಲಾವತಿ, ಉಪಾಧ್ಯಕ್ಷೆ ಗುಂಡಮ್ಮ ಫು¯್ಲÁ, ಸಂವಿಧಾನ ಸಂರP್ಷÀಣಾ ಸಮಿತಿ ಜಿ¯್ಲÁ ಸಂಚಾಲಕ ಬಸವರಾಜ ಮಾಳಗೆ, ಬೀದರ್ ಜೆಸ್ಕಾಂ ಇಇ ರಮೇಶ ಪಾಟೀಲï, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ, ರಾಷ್ಟಿçÃಯ ಸ್ವಯಂ ಸೇವಕ ಸಂಘದ ಪ್ರಮುಖ ನಾಗೇಶರಡ್ಡಿ, ಕನ್ನಡ ಸೇನೆಯ ರಾಜ್ಯ ಉಪಾಧ್ಯP್ಷÀ ರವಿಸ್ವಾಮಿ ನಿರ್ಣಾ, ಕಂದಾಯ ನಿರೀP್ಷÀಕ ಉಮೇಶ ಬುಜ್ಜಿ, ತೋಟಾಗಾರಿಕೆ ಅಧಿಕಾರಿ ಬಕ್ಕಪ್ಪ ಮನ್ನಳ್ಳಿ, ಜಾನಪದ ಸಾಹಿತ್ಯ ಪರಿಷತ್ ತಾಲೂಕು ಅಧ್ಯP್ಷÀ ಶರದ ನಾರಾಯಣ ಪೇಟಕರ, ಡಾ.ಸಾಗರ ಸೌರಭ, ಡಾ.ನಿಕಿತಾ ಸಾಗರ್, ಬಕ್ಕರೆಡ್ಡಿ ನಾಗನಕೇರಾ, ಶಂಕರ ಪಂಚಾಳ, ಶಿವರೆಡ್ಡಿ ಇತರರಿದ್ದರು.


ಮಹಾರುದ್ರ ಸ್ವಾಗತಿಸಿದರು. ನಾಗಪ್ಪ ಮಕಾಜಿ ನಿರೂಪಣೆ ಮಾಡಿದರು.
ಬೆಳಗ್ಗೆಯಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ರಾಣಿ ಸತ್ಯಾಮೂರ್ತಿ ನೃತ್ಯ ಅಕಾಡೆಮಿ ತಂಡದಿAದ ನಡೆದ ಹಲವು ನೃತ್ಯಗಳು, ವಿವಿಧ ಕಲಾವಿದರಿಂದ ನಡೆದ ಸಂಗೀತ, ಹಾಸ್ಯ ಕಾರ್ಯಕ್ರಮಗಳು ಭಕ್ತರ ಮನಸೊರೆಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net