

ಯಕ್ಕುಂಡಿ: ಸದಢ ಆರೋಗ್ಯಕ್ಕಾಗಿ ಗರ್ಭಿಣಿಯರು ಮತ್ತು ಬಾಣಂತಿಯರು, ಮಕ್ಕಳು, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು ಎಂದು ಸವದತ್ತಿ ಶಿಶು ಅಭಿವದ್ಧಿ ಯೋಜನಾಧಿಕಾರಿ ಸುನೀತಾ ಪಾಟೀಲ ಹೇಳಿದರು.
ಸಮೀಪದ ಕಾರ್ಲಕಟ್ಟಿಯ ಸಿದ್ಧಾರೂಢಮಠದ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವದ್ದಿ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ, ಗ್ರಾಮೀಣ ಆರೋಗ್ಯ ನೆರ್ಮಲ್ಯ ಹಾಗೂ ಪೋಷಣೆ ಮತ್ತು ಬಾಲ್ಯವಿವಾಹ ತಡೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಗು ಹುಟ್ಟಿದ ಅರ್ಧಗಂಟೆಯ ಒಳಗಡೆ ತಾಯಿ ಹಾಲನ್ನು ಕುಡಿಸಿದರೆ ಅದು ಅಮತಕ್ಕೆ ಸಮಾನವಾಗಿರುತ್ತದೆ ಎಂದರು. ಬಾಲ್ಯವಿವಾಹದಿಂದ ಆಗುವ ತೊಂದರೆ, ಇಲಾಖೆಯಿಂದ ಸಿಗುವ ಯೋಜನೆಗಳ ಮಾಹಿತಿ, ವೆಯಕ್ತಿಕ ಸ್ವಚ್ಛತೆ, ಸಾಮಾಜಿಕ ಆರೋಗ್ಯ ಪ್ರಜ್ಞೆಯ ಜಾಗತಿ ಮೂಡಿಸಿದರು.
ಸಮಾರಂಭದ ಅಧ್ಯತೆ ವಹಿಸಿ ಮಾತನಾಡಿದ ಯಕ್ಕುಂಡಿ ಗ್ರಾಪಂ ಅಧ್ಯೆ ಪೆರೋಜಾ ಬಾರಿಗಿಡದ, ತಾಯಂದಿರು ಅಂಗನವಾಡಿ ಕೇಂದ್ರದಲ್ಲಿ ಸರ್ಕಾರ ನೀಡುವ ಪೌಷ್ಟಿಕ ಆಹಾರ ಸೇವಿಸಬೇಕು. ಸರ್ಕಾರದಿಂದ ಸಿಗುವ ಎಲ್ಲ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ಸವದತ್ತಿ ಎಸಿಡಿಪಿಒ ಚೇತನಾ ಹಳ್ಳಿ, ಗ್ರಾಪಂ ಸದಸ್ಯರಾದ ಶಿವಾನಂದ ಕಂಬಿಯವರ, ಈರಪ್ಪ ಮಾದರ, ಶೇಖವ್ವ ತಿಮ್ಮೇಶಿ, ಭೀಮವ್ವ ಮಾದರ, ಆರೋಗ್ಯ ಇಲಾಖೆಯ ರೇಣುಕಾ ದೊಡ್ಡಕುರಿ, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕಿಯರು, ಆಶಾ ಕಾರ್ಯಕರ್ತರು, ಅಡುಗೆ ಸಹಾಯಕಿಯರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.