

ಯಾದಗಿರಿ: ತಾಲೂಕಿನ ಯರಗೋಳದಲ್ಲಿ ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದ ಟೀಕಾಚಾರ್ಯರ ಪೂರ್ವಾರಾಧನೆ ಸೋಮವಾರ ಸಂಭ್ರಮದಿAದ ನಡೆಯಿತು.
ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮ ತೀರ್ಥರು ಮಂಗಳಾರತಿ, ಮೂಲ ರಾಮದೇವರ ಪೂಜೆ, ತೀರ್ಥ, ಪ್ರಸಾದ, ಮಂತ್ರಾP್ಷÀತೆ, ತಪ್ತಮುದ್ರಾ ಧಾರಣೆ ನೆರವೇರಿಸಿ, ಆಶೀರ್ವಚನ ನೀಡಿದರು. ಶ್ರೀ ಸತ್ಯಾತ್ಮತೀರ್ಥರು ಮತ್ತು ಅವರ ಶಿಷ್ಯರು ಗುಡ್ಡದಲ್ಲಿರುವ ಗ್ರಂಥ ಸಾಕ್ಷಿ ಪ್ರಾಣ ದೇವರ ನಮಸ್ಕರಿಸಿ, ಜಯತೀರ್ಥರು ತಪಸ್ಸು ಮಾಡಿ, ಗ್ರಂಥ ರಚಿಸಿದ ಗುಹೆಗೆ ತೆರಳಿ ಪೂಜೆ, ಮಂಗಳಾರತಿ ಕಾರ್ಯಕ್ರಮ ನೆರವೇರಿಸಿದರು. ಸಾವಿರಾರು ಸಂಖ್ಯೆಯ ಭಕ್ತರು ಟೀಕಾರಾಯರು ಗ್ರಂಥ ರಚಿಸಿದ ಗುಹೆಯ ದರ್ಶನ ಪಡೆದು ಪುನೀತರಾದರು. ಮಹಿಳಾ, ಪುರುಷ ಭಜನಾ ತಂಡದವರು ಹಾಡುಗಳನ್ನು ಹಾಡಿ ಭಕ್ತಿ ಸಮರ್ಪಿಸಿದರು. ನೂರಾರು ಸಂಖ್ಯೆಯ ಭಕ್ತರು ಪಾದಯಾತ್ರೆಯ ಮೂಲಕ ಗ್ರಾಮಕ್ಕೆ ಆಗಮಿಸಿ. ಶ್ರೀಗಳ ದರ್ಶನ ಪಡೆದರು. ಯುವಕರು, ಯುವತಿಯರು, ಮಕ್ಕಳು, ವೃದ್ದರು ಹೊಸ ರೇಷ್ಮೆ ವಸ್ತçಗಳನ್ನು ಧರಿಸಿ ಆಗಮಿಸಿದ್ದು ವಿಶೇಷತೆ ಕಾಣಿಸಿತು.
ತುಂತುರು ಮಳೆಯ ನಡುವೆಯೂ, ನೂರಾರು ಸಂಖ್ಯೆಯ ಭಕ್ತರು ನೆರೆಯ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಆಗಮಿಸಿ ಗುಹೆಯಲ್ಲಿನ ಟೀಕಾರಾಯರ ದರ್ಶನ ಪಡೆದು ಪುನೀತರಾದರು.ಮಠದ ವ್ಯವಸ್ಥಾಪಕ ಸತ್ಯಭೋದಾಚಾರ್ಯ ಗಟಾಲಿ, ಪ. ನರಸಿಂಹಾಚಾರ್ಯ ಪುರಾಣಿಕ, ಶ್ರೀಪಾದ್, ಆಚಾರ್ಯ, ಮಹೇಶ್‌ರೆಡ್ಡಿ ಮುದ್ನಾಳ್, ವಿಲಾಸ್ ಪಾಟೀಲï, ಭೀಮಸೇನ್‌ರಾವï ಕುಲಕರ್ಣಿ, ಜಯತೀರ್ಥ, ಆನಂದ ಎಂ ಸವದಿ, ಪವÀನ್ ಕುಲಕರ್ಣಿ, ಗುರುರಾಜ ಕುಲಕರ್ಣಿ, ನಾಗೇಶ್ ಆಚಾರ್ಯ, ದ್ವಯಪಾನ ಆಚಾರ್ಯ, ಶಿವಣ್ಣ ಹಿರಿಕೇರಿ, ಪೊಲೀಸ್ ಸಿಬ್ಬಂದಿ ಶಿವಪುತ್ರ ಇತರರಿದ್ದರು.