ಸತ್ಯದ ಪರಿಶೋಧನೆಗೆ ಜೀವ ಮುಡಿಪಾಗಿಟ್ಟವರು

2 GAJENDRAGAD 1
Published on

ಗಜೇಂದ್ರಗಡ: ಪ್ರತಿಯೊಬ್ಬರೂ ಕಾಳಜಿಯಿಂದ ಸ್ವಚ್ಛತೆ ಕೆಲಸ ಮಾಡಬೇಕು. ಮನೆ, ಓಣಿ, ಊರು ಸುತ್ತ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಇದು ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರೀ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಬಿಜೆಪಿ ಐಟಿ ಸೆಲ್ ತಾಲೂಕು ಸಂಚಾಲಕ ರಾಜೇಂದ್ರ ಘೊರ್ಪಡೆ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಗಾಂಧೀ ಹಾಗೂ ಲಾಲ್ ಬಹಾದೂರ್ ಶಾಸ್ತ್ರೀ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತು ಕಡಗದ, ಅಶೋಕ ವನ್ನಾಲ, ಭಾಸ್ಕರಸಾ ರಾಯಬಾಗಿ, ರಾಜು ಸೂರ್ಯವಂಶಿ, ವೀರಣ್ಣ ಅಂಗಡಿ, ಶಂಕರ ಇಂಜನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net