ಸತ್ಯಂ, ಶಿವಂ, ಸುಂದರಂ ಪ್ರಶಸ್ತಿ ಪ್ರದಾನ

20 hbd 03
Published on

ಹುಮನಾಬಾದ್: ಅರ್ಹತೆ ಹೊಂದಿರುವ ಸೂಕ್ತ ವ್ಯಕ್ತಿಗಳಿಗೆ ಗುರುತಿಸಿ ಪ್ರಶಸ್ತಿ ನೀಡಿದಲ್ಲಿ ಪ್ರಶಸ್ತಿ ಮೌಲ್ಯ ಹೆಚ್ಚುತ್ತದೆ ಎಂದು ಹಿಂದೂ ಮಹಾ ಸಭಾ ಅಧ್ಯಕ್ಷ ವಿವೇಕಾನಂದ ಸ್ವಾಮಿ ಹೇಳಿದರು. ಪಟ್ಟಣದ ಹತ್ತಿರದಲ್ಲಿರುವ ಲಾಲಧರಿ ಆಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡ ಸತ್ಯಂ, ಶಿವಂ, ಸುಂದರಂ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೊ.ವೆಂಕಣ್ಣ ಡೊಣ್ಣೆಗೌಡ (ಸಾಮಾಜಿಕ ಕ್ಷೇತ್ರ), ಯರಬಾಗದ ಅನೀಲಕುಮಾರ ಸ್ವಾಮೀಜಿ (ಆಧ್ಯಾತ್ಮಿಕ ಕ್ಷೇತ್ರ), ಶಿವಶಂಕರ ತರನಳ್ಳಿ (ಮಾಧ್ಯಮ) ಅವರಿಗೆ ಸತ್ಯ, ಶಿವಂ, ಸುದರಂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಮೃತ್ಯುಂಜಯ ಸ್ವಾಮೀಜಿ, ಸದ್ಲಾಪುರದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಯರಬಾಗದ ಚನ್ನವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಐ.ಎಸ್.ಶಕೀಲ್, ಈಶ್ವರ ತಡೋಳಾ, ಶಿವರಾಜ ಮೇತ್ರೆ, ಬಸವರಾಜ ದಯಾಸಾಗರ, ನಾಗರಡ್ಡಿ ಬಯ್ಯಾನ, ಪ್ರಭುರೆಡ್ಡಿ ಕೌಡಾಳೆ, ವಿಠ್ಠಲ್, ಸಂಜೀವರೆಡ್ಡಿ ಮೇಲಿನಮನಿ, ರಾಜಕುಮಾರ ಔರಂಗಾಬಾದಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net