ಸತ್ಯ, ಧರ್ಮಕ್ಕೆ ಎಂದಿಗೂ ಜಯ

Patha Sanchalana
Published on

ಕಲಬುರಗಿ: ಅಧರ್ಮದ ಮೇಲೆ ಧರ್ಮದ ಜಯ, ಅಸತ್ಯದ ಮೇಲೆ ಸತ್ಯದ ಜಯ ಹಾಗೂ ಅಜ್ಱಆನದ ಮೇಲೆ ನದ ಜಯ ಯಾವತ್ತಿಗೂ ಕಟ್ಟಿಟ್ಟ ಬುತ್ತಿ ಎಂದು ಬೀದರ್ ಜಿ¯್ಲೆ ವಿದ್ಯಾಭಾರತಿ ಕಾರ್ಯದರ್ಶಿ ಭಗುಸಿಂಗ್ ಜಾಧವ್ ಹೇಳಿದರು.

ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ವಿಜಯದಶಮಿ ಉತ್ಸವ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾನುವಾರ ಹಮ್ಮಿಕೊಂಡಿದ್ದ ಆಕರ್ಷಕ ಪಥಸಂಚಲನ, ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘದ ಶಕ್ತಿಯ ಅರಿವು ಇಡೀ ವಿಶ್ವಕ್ಕಿದೆ. ಜಗತ್ತಿನ ವಿವಿಧ ಸ್ತರಗಳಲ್ಲಿ ಸಂಘದ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದು, ಹಿಂದು ಧರ್ಮದ ಉಳಿವಿಗಾಗಿ ವಿಶ್ವವ್ಯಾಪಿ ಜಾಗೃತಿ ಅಭಿಯಾನ, ಧರ್ಮ ರP್ಷÀಣೆ ಕಾರ್ಯ ನಿರಂತರ ನಡೆಯುತ್ತಿದೆ ಎಂದು ತಿಳಿಸಿದರು.

ಕೆಲ ವಿರೋಧಿಗಳು ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಅಪಹಾಸ್ಯ ಮಾಡುತ್ತಿದ್ದರು. ಆದರೀಗ ಅವರಿಗೆ ಮಂದಿರ ನಿರ್ಮಾಣ ಮತ್ತು ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ವಾಗ್ದಾಳಿ ನಡೆಸಿದರು.

೨೦೧೪ರಿಂದ ಈವರೆಗೆ ಭಾರತದ ಚಿತ್ರಣವೇ ಬದಲಾಗಿದೆ. ಇಡೀ ವಿಶ್ವ ನಮ್ಮತ್ತ ತಿರುಗಿ ನೋಡುವ ಹಾಗೆ ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಚಂದ್ರಯಾನ-೩ ಯಶಸ್ವಿ ನಂತರ ಭಾರತ ಇತಿಹಾಸದ ಪುಟಗಳಲ್ಲಿ ತನ್ನ ಮೊಹರು ಒತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಿವಿಲ್ ಇಂಜಿನಿಯರ್ ಮನೀಶ್ ವೈಕುಂಠ ಮಾತನಾಡಿ, ಸಂಘದ ನಿಸ್ವಾರ್ಥ ಸೇವೆ ಎಂದಿಗೂ ಶ್ಲಾಘನೀಯ ಎಂದರು. ನಗರದ ವ್ಯವಸ್ಥಾ ಪ್ರಮುಖ ಶರಣರಾಜ ಖೇಳೆಗಾಂವಕರ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net