ಸತ್ಯ, ಅಹಿಂಸೆಯ ಹಾದಿಯಲ್ಲಿ ನಡೆಯಿರಿ

10BRG1
Published on

ಬೋರಗಾಂವ: ಭಗವಾನ ಮಹಾವೀರರ ಜನ್ಮ ದಿನ ಭಾರತೀಯ ಮಾನವೀಯ ಮೌಲ್ಯಗಳ ಆಚರಣೆಯಾಗಿದೆ. ಶಾಂತಿಯುತ ಜೀವನ ಪ್ರತಿಪಾದಿಸುವುದರ ಜತೆಗೆ ಜೀವಗಳೊಂದಿಗೆ ಸ್ನೇಹ ಭಾವನೆ ಬೆಳೆಸಿಕೊಳ್ಳಿ ಎಂದು ಯುವ ನಾಯಕ ಉತ್ತಮ ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ಚಿಕ್ಕ ಬಸ್ತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ ಮಹಾವೀರರ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.

ಮೀನಾಕ್ಷಿ ಪಾಟೀಲ ಮಾತನಾಡಿ, ಸತ್ಯ ಮತ್ತು ಅಹಿಂಸೆಯ ಹಾದಿಯಲ್ಲಿ ನಡೆಯಲು ಭಗವಾನ ಮಹಾವೀರರು ಸ್ಪೂರ್ತಿ ನೀಡಿದ್ದಾರೆ ಎಂದರು.

ಡಾ.ರಾಜಗೊಂಡ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ದಿಗಂಬರ ಜೈನ ಸಮುದಾಯದ ಪಲ್ಲಕ್ಕಿ ಮೆರವಣಿಗೆಯ ಜರುಗಿತು. ಮಾಜಿ ಜಿಪಂ ಸದಸ್ಯ ಅಣ್ಣಾಸಾಹೇಬ ಹವಲೆ, ಮನೋಜಕುಮಾರ ಪಾಟೀಲ, ರಾಜು ಮಗದುಮ್ಮ, ಅಭಯಕುಮಾರ ಮಗದುಮ್ಮ, ಬಾಬಾಸೋ ವಠಾರೆ, ಬಾವುಸಾಹೇಬ ಪಾಟೀಲ, ಶೀತಲ ಅಮ್ಮಣ್ಣವರ, ಅಶೋಕ ಪಾಟೀಲ, ಅಭಯಕುಮಾರ ಕರೋಲೆ, ವಿದ್ಯಾಧರ ಅಮ್ಮಣ್ಣನವರ, ಅಣ್ಣಾಸಾಹೇಬ ಭೋಜಕರ ಹಾಗೂ ಶ್ರಾವಕ-ಶ್ರಾವಕಿಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net