

ಕೊಳ್ಳೇಗಾಲ: ಕೊಟ್ಟಿದ್ದ ಹಣ ವಾಪಾಸ್ ಕೇಳಿದ್ದಕ್ಕೆ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ನಾಲ್ವರ ಗುಂಪು ಅವ್ಯಾಚ ಶಬ್ಧದಿಂದ ನಿಂದಿಸಿ ಹಲ್ಲೆ ಮಾಡಿರುವ ಪ್ರಕರಣ ಠಾಣೆ ಮೆಟ್ಟಲೇರಿದೆ.
ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಪರಾಜು ಹಲ್ಲೆಗೊಳಗಾದ ವ್ಯಕ್ತಿ. ಅದೇ ಗ್ರಾಮದ ತಮ್ಮಯ್ಯ ಶೆಟ್ಟಿ, ಪುಟ್ಟ, ಶಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದರಾಜು ಎಂಬುವರ ಗಲಾಟೆ ಮಾಡಿ. ಗ್ರಾ.ಪಂ ಅಧ್ಯಕ್ಷ ಕೆಂಪರಾಜು ತಮ್ಮಯ್ಯ ಶೆಟ್ಟಿಗೆ ಹಣ ನೀಡಿದ್ದರು.
ಈ ವಿಚಾರವಾಗಿ ಸತ್ತೇಗಾಲ ಹ್ಯಾಂಡ್ ಪೋಸ್ಟ್ ನಲ್ಲಿ ತಮ್ಮಯ್ಯ ಶೆಟ್ಟಿಗೆ ಕೊಟ್ಟ ಹಣವನ್ನು ನೀಡುವಂತೆ ಬುಧವಾರ ಕೇಳುತ್ತಿದ್ದಾಗ ಪಕ್ಕದಲ್ಲಿದ್ದ ಶಾಂತರಾಜು, ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದ ರಾಜು, ಪುಟ್ಟಣ್ಣ ಹಾಗೂ ತಮ್ಮಯ್ಯ ಶೆಟ್ಟಿ ತೀಟೆ ಜಗಳ ತೆಗೆದು ಕೆಂಪರಾಜುಗೆ ಅವ್ಯಾಚ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಕೆಂಪರಾಜು ಕೊಳ್ಳೇಗಾಲ ಉಪವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾ ಗಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ಪೊಲೀಸರು ಕೆಂಪರಾಜು ಅವ ರಿಂದ ಗಲಾಟೆಯ ಹೇಳಿಕೆ ಪಡೆದಿದ್ದಾರೆ.
ಪ್ರತಿ ದೂರು:ಗ್ರಾ.ಪಂ ಅಧ್ಯಕ್ಷ ಕೆಂಪರಾಜು ದೂರು ನೀಡಿದ ಬೆನ್ನಲೆ ಗ್ರಾ.ಪಂ ಸದಸ್ಯೆ ಗೋವಿಂದರಾಜು ಕೆಂಪರಾಜು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕೊಳ್ಳೇ ಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲಾಗಿದ್ದಾರೆ. ಇವರಿಬ್ಬರಿಂದ ಪ್ರತ್ಯೇಕ ದೂರು ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.