ಸತ್ತಿಹಳ್ಳಿ ಗ್ರಾಪಂ ಅವ್ಯವಹಾರ ಆರೋಪ ಸತ್ಯಕ್ಕೆ ದೂರ

6 ckm 6 druvakumar
ಗ್ರಾಪಂ ಮಾಜಿ ಅಧ್ಯಕ್ಷ ಧ್ರುವ ಕುಮಾರ್
Published on

ಚಿಕ್ಕಮಗಳೂರು: ತಾಲೂಕಿನ ಸತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಪಂ ಅಧ್ಯಕ್ಷ ರಾಮಯ್ಯ ಅವರು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಧ್ರುವ ಕುಮಾರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ಮಾಜಿ ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಲ್ ಗಳಿಗೆ ಸಹಿ ಮಾಡಿದ್ದಾರೆ. ಪಿಡಿಒ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಬಿಲ್ ಮಂಜೂರು ಮಾಡಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.

ತಾವು ಗ್ರಾಪಂ ಅಧ್ಯಕ್ಷರಾಗಿದ್ದಾಗ ೨೦೨೪-೨೫ನೇ ಸಾಲಿನ ಹಣಕಾಸು ಯೋಜನೆ ಅಡಿ ಕಾಮಗಾರಿಗಳಿಗೆ ಗ್ರಾಪಂ ಸಭೆಯಲ್ಲಿಯೇ ಕ್ರಿಯಾ ಯೋಜನೆ ತಯಾರಿಸಿ ಕಾರ್ಯದೇಶ ನೀಡಲಾಗಿತ್ತು. ಬಳಿಕ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದಾರೆ. ಕಾಮಗಾರಿ ಪೂರ್ಣಗೊಂಡ ನಂತರ ಸಂಬAಧಿಸಿದ ಇಲಾಖೆಗಳು ಕಾಮಗಾರಿಯ ಬಿಲ್ ನೀಡಿವೆ. ಹೀಗೆ ಗ್ರಾಪಂಗೆ ಬಂದ ಬಿಲ್ ಗಳನ್ನು ಪರಿಶೀಲನೆ ನಡೆಸಿ, ಜಿಪಿಎಸ್ ಮಾಡಿ ಪಾಸ್ ಮಾಡಲಾಗಿದೆ. ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡುವ ಮೊದಲೇ ಈ ಎಲ್ಲ ಬಿಲ್ ಗಳಿಗೆ ಸಹಿ ಮಾಡಿz್ದೆÃನೆ. ಆದರೆ ತಾಂತ್ರಿಕ ದೋಷದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗುವುದು ನಾಲ್ಕೈದು ದಿನ ತಡವಾಗಿರಬಹುದು. ಇದಕ್ಕೆ ತಾವು ಯಾವುದೇ ಕಾರಣಕ್ಕೂ ಹೊಣೆಯಲ್ಲ ಎಂದರು.

ತಾನು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಮಗಾರಿಯನ್ನು ನಡೆಸದೆ ಯಾವುದೇ ಬಿಲ್ ಮಾಡಿಲ್ಲ. ನನ್ನ ಅವಧಿಯಲ್ಲಿ ಅಕ್ರಮ ನಡೆದಿದೆ ಎನ್ನುವುದಾದರೆ ಯಾವುದೇ ತನಿಖೆ ಎದುರಿಸಲು ಸಿದ್ಧನಾಗಿz್ದÉÃನೆ. ಗ್ರಾಪಂ ಪಿಡಿಒ ತುಂಬಾ ಶಿಸ್ತಿನವರಾಗಿದ್ದಾರೆ. ಇದನ್ನು ಇಂದಿನ ಅಧ್ಯಕ್ಷರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದಾಗಿ ಪಿಡಿಒ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ವರ್ಗಾವಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಪದ್ಮಶ್ರೀ, ಗೀತಾ, ರಮ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net