

ನಂದೇಶ್ವರ: ಸತ್ಕಾರ್ಯದಿಂದ ಜೀವನ ಸಾರ್ಥಕವಾಗುತ್ತದೆ. ಸತಿ-ಪತಿ ಒಂದಾಗಿ ಕೈಗೊಂಡ ಕಾರ್ಯ ದೇವರಿಗೆ ತಲುಪುತ್ತದೆ ಎಂದು ಕೊಜ್ಜಾನಟ್ಟಿಯ ಗಿರೀಶ ಮಹಾರಾಜರು ಹೇಳಿದರು.
ಸಮೀಪದ ರಡ್ಡೇರಹಟ್ಟಿ ಗ್ರಾಮದ ಶ್ರೀ ಗಿರಮಲ್ಲೇಶ್ವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗುರು-ಹಿರಿಯರಿಗೆ ಗೌರವ ಕೊಡಬೇಕು. ಪ್ರತಿಯೊಬ್ಬರೂ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.
ಅಣ್ಣಾಸಾಹೇಬ ಬಿಸಲಾಪುರ, ಮಲ್ಲಪ್ಪ ಬೆಳ್ಳಂಕಿ, ಸದಾಶಿವ ಗಲಗಲಿ, ಚಂದು ಬೆಳ್ಳಂಕಿ, ಕುಮಾರ ಮಗದುಮ, ಯಲ್ಲಪ್ಪ ಬೆಳ್ಳಂಕಿ, ಬಸವರಾಜ ತಳವಾರ, ಬಸವರಾಜ ಗಲಗಲಿ, ಪಾಂಡು ಭೋಸಲೆ, ಸಂಗಪ್ಪ ಭೂಸರೆಡ್ಡಿ, ಸುರೇಶ ಗಲಗಲಿ, ಸುಭಾಷ ಬೆಳ್ಳಂಕಿ, ಶ್ರೀಶೈಲ ಬೆಕ್ಕೇರಿ, ಮಾಧವಾನಂದ ಬೆಳ್ಳಂಕಿ, ಚಂದು ಗಲಗಲಿ, ಧ್ಯಾನೇಶ್ವರ ಖೋತ ಇತರರು ಇದ್ದರು.