ಸತ್ಕಾರ್ಯಗಳಿಗೆ ದಾನ ಮಾಡಬೇಕು

2
Published on


ಬೆಟಗೇರಿ: ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ನೀಡುವ ಶಕ್ತಿ ಸದ್ಗುರುವಿಗಿದೆ. ಒಳ್ಳೆಯ ಕಾರ್ಯಕ್ಕೆ ದಾನ, ಧರ್ಮ ಮಾಡಬೇಕು. ಅದರಿಂದ ಪುಣ್ಯ ಬರುತ್ತದೆ ಎಂದು ಇಂಚಲ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.

ಗ್ರಾಮದ ಗಜಾನನ ವೇದಿಕೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 40ನೇ ಸತ್ಸಂಗ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಾಧಕರನ್ನು ಸತ್ಕರಿಸಲಾಯಿತು, ಶರಣೆ ಮಲ್ಲವ್ವ ಪಡಶೆಟ್ಟಿ ಹಾಗೂ ಮಕ್ಕಳಿಂದ ಮಹಾಪ್ರಸಾದ ಸೇವೆ ನೆರವೇರಿತು. ಈಶ್ವರ ದೇವರಿಗೆ ಮಹಾಪೂಜೆ, ನೈವೇದ್ಯ ಸಮರ್ಪಿಸಲಾಯಿತು. ಸ್ಥಳಿಯ ಭಕ್ತರಿಂದ ಇಂಚಲದ ಡಾ.ಶಿವಾನಂದ ಭಾರತಿ ಶ್ರೀಗಳಿಗೆ ತುಲಾಭಾರ ಸೇವೆ, ಕಿರೀಟ ಮಹಾಪೂಜೆ, ದಾನಿಗಳಿಗೆ ಆಶೀರ್ವಾದ, ಶಿವಭಜನೆ, ಶಿವ ಜಾಗರಣೆ, ಐದು ದಿನ ಪ್ರವಚನ ನಡೆಯಿತು. ಗದಗದ ಶಿವಶರಣೆ ಡಾ.ನೀಲಮ್ಮತಾಯಿ ಅಸುಂಡಿ, ಮಲ್ಲಾಪುರ(ಕೆ.ಎನ್​)ದ ಚಿದಾನಂದ ಸ್ವಾಮೀಜಿ, ಸುಣಧೋಳಿ ಅಭಿನವ ಶಿವಾನಂದ ಸ್ವಾಮೀಜಿ, ತೊಂಡಿಕಟ್ಟಿ ಅಭಿನವ ವೆಂಕಟೇಶ್ವರ ಮಹಾರಾಜರು, ಹಡಗಿನಾಳದ ಮಲ್ಲೇಶ ಶರಣರು, ಗದಗದ ಶರಣೆ ಮೈತ್ರಾತಾಯಿ ಇತರರಿದ್ದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net