ಸತ್ಕಾರ್ಯಗಳಿಂದ ಸದ್ಗತಿ ಪ್ರಾಪ್ತಿ

2
Published on


ಮೂಡಲಗಿ: ದಾನದಂಥ ಸತ್ಕಾರ್ಯಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿ ಜತೆಗೆ ಮೋಕ್ಕೆ ದಾರಿಯಾಗುತ್ತವೆ ಎಂದು ಹಿರೇಕೆರೂರ&ಹಾವೇರಿ ಭೀಮಾವಧೂತ ಮಠದ ನಾಗೇಶ್ವರ ಸ್ವಾಮೀಜಿ ಹೇಳಿದ್ದಾರೆ.

ತಾಲೂಕಿನ ಕಲ್ಲೋಳಿಯಲ್ಲಿ ಜರುಗುತ್ತಿರುವ 41ನೇ ವರ್ಷದ ನವರಾತ್ರಿ ಉತ್ಸವದ 7ನೇ ದಿನ ಬುಧವಾರ ದೇವಿಪುರಾಣ ಮತ್ತು ಉಪದೇಶಾಮೃತ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾನ ಪಡೆಯುವವರಿಗೆ ಉಪಯುಕ್ತವಾಗಿರುವುದನ್ನೇ ದಾನ ಮಾಡಬೇಕು. ಅದರಲ್ಲಿ ಲಾಪೇೆ ಇರದಿದ್ದರೆ ಅದೇ ನಿಜ ದಾನ ಎಂದರು. ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದ್ದು, ಮನುಷ್ಯನಾದವನು ನಿತ್ಯ ಸ್ಮರಿಸಬೇಕು. ದೇವರು ಕೊಟ್ಟಿದ್ದನ್ನು ಕಷ್ಟದಲ್ಲಿರುವವರಿಗೆ ಕೊಡುವುದೇ ನಿಜ ಧರ್ಮ ಎಂದರು. ದುಷ್ಟಶಕ್ತಿಗಳ ಸಂಹಾರ ಮಾಡುವ ಉದ್ದೇಶದಿಂದ ನವರಾತ್ರಿ ಆಚರಿಸಲಾಗುತ್ತದೆ. ಶ್ರದ್ಧೆಯಿಂದ ದೇವಿ ಪುರಾಣ ಆಲಿಸುವುದರಿಂದ ಬದುಕಿನಲ್ಲಿ ಕಷ್ಟ, ಕಾರ್ಪಣ್ಯಗಳು ದೂರವಾಗಿ ಸಂತೋಷ ಲಭಿಸುತ್ತದೆ ಎಂದರು. ಹುಲ್ಲಾಳ&ಜಮಖಂಡಿ ಸಿದ್ದ ಓಂಕಾರ ಆಶ್ರಮದ ಮಾತೋಶ್ರೀ ಜಯಶ್ರೀದೇವಿ ಮಾತನಾಡಿದರು. ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಏರ್ಪಡಿಸಲಾಗಿತ್ತು.

ನವರಾತ್ರಿ ಉತ್ಸವದ ಸ್ವಾಗತ ಸಮಿತಿ ಅಧ್ಯ ರಾವಸಾಹೇಬ ಬೆಳಕೂಡ, ಸಮಿತಿ ವ್ಯವಸ್ಥಾಪಕ ಸಿದ್ದು ಮಾಯನ್ನವರ, ಸಮಿತಿ ಸದಸ್ಯರಾದ ಭಗವಂತ ಪತ್ತಾರ, ಕೀತಲ ಅಡಣಿ, ಉಮೇಶ ಪಾಟೀಲ, ಶಿವಾನಂದ ಹೆಬ್ಬಾಳ, ರಾಮಪ್ಪ ಬೆಳಕೂಡ, ವಿಜಯಕುಮಾರ ಬಾಗಲಕೋಟ, ಸಿದ್ದಪ್ಪ ಜಾನಾಪುರ, ರಮೇಶ ಕಡಲಗಿ, ಅಡಿವೆಪ್ಪ ಬೀರಗೌಡ್ರ, ಲಕ್ಷ$್ಮಣ ಹುಕ್ಕೇರಿ, ಕುಮಾರ ರಾಚನ್ನವರ, ಹಣಮಂತ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net