ಸತ್ಕಾರ್ಯಗಳಿಂದ ಜೀವನ ಸಾರ್ಥಕ

13blk1
ಭಾಲ್ಕಿ ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದ ಸಿದ್ದಮ್ಮ ಕಲ್ಯಾಣರಾವ ಪಾಟೀಲ್ ಗುರುಕುಲ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಿದ್ದಮ್ಮ ಕಲ್ಯಾಣರಾವ ಪುಣ್ಯಸ್ಮರಣೆಯಲ್ಲಿ ಚಾಮರಾಜನಗರದ ಮರಿಯಾಲ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಶ್ರೀ ಗುರುಬಸವ ಪಟ್ಟದ್ದೇವರು, ಮಲ್ಲಿಕಾರ್ಜುನ ಪಾಟೀಲ್ ಮುಗನೂರ ಇತರರಿದ್ದರು.
Published on

ಭಾಲ್ಕಿ: ವಾರಂಟಿ, ಗ್ಯಾರಂಟಿ ಇಲ್ಲದ ಮಾನವನ ಜೀವನದಲ್ಲಿ ಸದಾ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಚಾಮರಾಜನಗರದ ಮರಿಯಾಲ ಮುರುಘರಾಜೇಂದ್ರ ಸ್ವಾಮಿ ಮಹಾಸಂಸ್ಥಾನ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.

ಖಟಕ್ ಚಿಂಚೋಳಿ ಗ್ರಾಮದ ಸಿದ್ದಮ್ಮ ಕಲ್ಯಾಣರಾವ ಪಾಟೀಲ್ ಗುರುಕುಲ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಸಿದ್ದಮ್ಮ ಕಲ್ಯಾಣರಾವ ಪುಣ್ಯಸ್ಮರಣೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯನಾಗಿ ಹುಟ್ಟುವುದೇ ವಿಶೇಷವಾಗಿದ್ದು, ಏನಾದರೂ ಸಾಧನೆ ಮಾಡುವುದು ಅನಿವಾರ್ಯ ಮತ್ತು ಅವಶ್ಯಕ. ಸತ್ಕಾರ್ಯ ಸದಾಚಾರಗಳನ್ನು ಹೊಂದುವ ಮೂಲಕ ಅನಶ್ಚಿತ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರತಿಯೊಬ್ಬರಲ್ಲಿ ಒಳ್ಳೆಯ ಕಾರ್ಯ ಮಾಡುವ ತುಡಿತ ಇರಬೇಕು ಎಂದರು.

ನೀಲಮ್ಮ ತಾಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್ ಮುಗನೂರ ಇತರರಿದ್ದರು. ಬಸಮ್ಮ, ಪ್ರತೀಕ್ಷಾ, ಸ್ಪೂರ್ತಿ ಪ್ರಾರ್ಥನೆ ಗೀತೆ ನಡೆಸಿ ಕೊಟ್ಟರು. ಶಿಲ್ಪಾ ಲಾಡವಂತೆ ಸ್ವಾಗತಿಸಿದರು. ಶಿವಶಂಕರ ಹಡಪದ ನಿರೂಪಣೆ ಮಾಡಿದರು. ಗುರುರಾಜ ಹೌಂಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net