ಸತ್ಕರ್ಮದಿಂದ ಲಭಿಸುತ್ತೆ ಅಧಿಕ ಪುಣ್ಯ

web3
ಮುರಗೋಡದ ಶ್ರೀ ಶಿವ ಚಿದಂಬರೇಶ್ವರ ಮಠದಲ್ಲಿ ಏರ್ಪಡಿಸಿದ್ದ ಅಧಿಕ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಲಿಂಗ ಪೂಜೆ ನೆರವೇರಿತು. ಮಥುರಾಬಾಯಿ, ಯಮುನಾಬಾಯಿ ದೀಕ್ಷಿತ, ಮಹಿಳೆಯರು ಇತರರು ಇದ್ದರು.
Published on

ಮುರಗೋಡ: ಸ್ಥಳೀಯ ಶ್ರೀಕ್ಷೇತ್ರ ಕೆಂಗೇರಿಯ ಶ್ರೀ ಶಿವಚಿದಂಬರೇಶ್ವರ ಮಠದಲ್ಲಿ ಮಂಗಳವಾರ ಶ್ರಾವಣ ಅಧಿಕ ಮಾಸದ ಪ್ರಯುಕ್ತ ವಿಶೇಷ ಕಾರ್ಯಕ್ರಮವು ಸಹಸ್ತಾರು ಭಕ್ತರ ಸಮ್ಮುಖದಲ್ಲಿ ಪೀಠಾಧಿಕಾರಿ ದಿವಾಕರ ದೀಕ್ಷಿತ ಗುರು ಮಹಾರಾಜರ ನೇತೃತ್ವದಲ್ಲಿ ಜರುಗಿತು. ಹೋಮ-ಹವನ, ಲಿಂಗಪೂಜೆ ನೆರವೇರಿದವು.

ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಪೀಠಾಧಿಕಾರಿ ದಿವಾಕರ ದೀಕ್ಷಿತ ಗುರು ಮಹಾರಾಜರು, ಪ್ರತಿ ಮೂರು ವರ್ಷಕ್ಕೂಮ್ಮೆ ಬರುವ ಅಧಿಕ ಶ್ರಾವಣ ಮಾಸವು ಸರ್ವಪುಣ್ಯ ಕಾರ್ಯಗಳಿಗೆ ಗ್ರಾಹ್ಯವಾಗಿದೆ. ಈ ಮಾಸದಲ್ಲಿ ಮಾಡಲ್ಪಡುವ ಸತ್ಕರ್ಮಗಳಿಗೆ ಅಧಿಕ ಪುಣ್ಯವಿರುವುದರಿಂದ ನಾಡಿನ ಸ್ರಹಸಾರು ಭಕ್ತರು, ಹೊರರಾಜ್ಯದ ಭಕ್ತರೂ ಆಗಮಿಸಿ ಪವಿತ್ರ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಭಕ್ತರಿಗೆ ಆಯುಷ್ಯ, ಆರೋಗ್ಯ ಪ್ರಾಪ್ತವಾಗಲಿ ಎಂದು ಹಾರೈಸಿದರು.

ಚಿದಂಬರ ತೊರಗಲ್ಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೀಠಾಧಿಕಾರಿ ದಿವಾಕರ ದೀಕ್ಷಿತ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿದಿನ ಬೆಳಗ್ಗ 333 ಸತ್ಯಚಿದಂಬರ ಪೂಜೆ, ಮಧ್ಯಾಹ್ನ ಮಹಾ ಮಂಗಳಾರತಿ, ಶ್ರೀಗಳಿಂದ ಆಶೀರ್ವಾದ, ತೀರ್ಥಪ್ರಸಾದ, ಸಂಜೆ ಅಷ್ಠಾವದನ ಸೇವೆ, ಮಹಾಮಂಗಳಾರತಿ, ಮಹಿಳೆಯರಿಂದ ದೇವಿಗೆ ಕುಂಕುಮಾರ್ಚನೆ, ವಿಷ್ಣು ಸಹಸ್ರನಾಮ ಹೋಮ ಹಾಗೂ ಸಕಲ್ಪ ಮಹಾಮಂಗಳಾರತಿ, ಅನ್ನ ಸಂತರ್ಪಣಾ ಸೇವೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಮಾತೋಶ್ರೀ ಮಥುರಾಬಾಯಿ, ಯಮುನಾಬಾಯಿ ದೀಕ್ಷಿತರು, ಶಂಕರಯ್ಯ ಮಲ್ಲಯ್ಯನವರಮಠ, ಹುಲೆಪ್ಪ ರಗಟ್ಟಿ, ಸುಧೀಂದ್ರ ಹಂಪಿಹೊಳಿ, ವಿ.ಬಿ.ದೇಸಾಯಿ, ರಮೇಶ ದೇಶಪಾಂಡೆ, ಪಂಡರಿನಾಥ ಜೋಶಿ, ಶಿವನಗೌಡ ಪಾಟೀಲ, ಮಲ್ಲಿಕಾರ್ಜುನ ಬಾಳಿಕಾಯಿ, ಕೋಮಲ ಕಡ್ಲಾಸ್ಕರ, ಮುರಳೀಧರ ಹೂಲ್ಲೂರ, ಎನ್.ವಿ.ಬಿಂಗೆ, ಮಹೇಶ ದೇಶಪಾಂಡೆ, ಅಮಠೆ ಗುರುಗಳು ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net