'ಸತೀಶ್ ಜಾರಕಿಹೊಳಿ ಅವರನ್ನುರಾಜಕೀಯವಾಗಿ ಮುಗಿಸಲು ಷಡ್ಯಂತ್ರ'

7106eb3a-ed0b-42e6-b94a-265a001e4523
Published on

ಮೈಸೂರು: ಹಿಂದು ಪದದ ಕುರಿತು ಹೇಳಿಕೆ ನೀಡಿರುವ ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಆರೋಪಿಸಿದರು.


ಜಾರಕಿಹೊಳಿ ಅವರು ಹಿಂದು ಎಂಬ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ಯಾವ ಅರ್ಥವಿದೆ ಎಂಬ ಬಗ್ಗೆಯಷ್ಟೇ ಮಾತನಾಡಿದ್ದಾರೆ. ಈ ಬಗ್ಗೆ ಆರೋಗ್ಯಕರ ಚರ್ಚೆ ನಡೆಯಬೇಕೇ ಹೊರತು ಅವರ ವಿರುದ್ಧ ಒಂದು ಪಕ್ಷದಿಂದ ರಾಜಕೀಯ ಪ್ರೇರಿತರಾಗಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಪ್ರಗತಿಪರರು ಸಹ ಅವರ ಪರವಾಗಿ ಹೋರಾಟ ನಡೆಸಬಲ್ಲವರಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ದೇವರಕೋಲು ಮುಟ್ಟಿದ ದಲಿತ ಬಾಲಕನೊಬ್ಬನಿಗೆ ಬಹಿಷ್ಕಾರ ಹಾಕಿದ ಉದಾಹರಣೆಯೂ ರಾಜ್ಯದಲ್ಲಿದೆ. ಈ ವೇಳೆ ಹಿಂದು ಧರ್ಮಕ್ಕೆ ಕಳಂಕ ಬರಲಿಲ್ಲವೇ, ಇನ್ನೂ ಬಹಳಷ್ಟು ಕಡೆ ಶೂದ್ರ, ದಲಿತ ಸಮುದಾಯದವರನ್ನು ದೇವಾಲಯಗಳಿಗೆ ಸೇರಿಸುತ್ತಿಲ್ಲ. ಹಿಂದು ಧರ್ಮ ಅಸಮಾನತೆಯ ಗೂಡಾಗಿದೆ.

ಹಿಂದು ಧರ್ಮದ ಹೆಸರಿನಲ್ಲಿ ವೋಟ್ ಬ್ಯಾಂಕ್‌ಗಾಗಿ ಅಸಹ್ಯ ರಾಜಕಾರಣ ಮಾಡಲಾಗುತ್ತಿದೆ. ಸಾಮರ್ಥ್ಯ ಇದ್ದರೆ ಪ್ರತಿಭಟಿಸುವವರು ಹಿಂದು ಧರ್ಮದಲ್ಲಿನ ಅಸಮಾನತೆ ಹೋಗಲಾಡಿಸಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net