ಸತತ ಹತ್ತಾರು ವರ್ಷಗಳ ಪ್ರಯತ್ನಕ್ಕೆ ಕೊನೆಗೂ ಸಿಕ್ಕಿತು ಪ್ರತಿಫಲ

CTD---KV JAGA
Published on

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಬೇಕೆಂಬ ಹತ್ತಾರು ವರ್ಷಗಳ ಪ್ರಯತ್ನಕ್ಕೆ ಕೊನೆಗೂ ಪ್ರತಿಫಲ ದೊರಕಿದ್ದು, ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸಂಪುಟ ಹಸಿರು ನಿಶಾನೆ ತೋರಿಸಿದೆ. ಹಿಂದಿನ ಸಂಸದರಾದ ಜನಾರ್ದನ ಸ್ವಾಮಿ,ಬಿ.ಎನ್. ಚಂದ್ರಪ್ಪ ಹಾಗೂ ಹಿಂದಿನ ಸಂಸದ,ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು,ಕೇಂದ್ರೀಯ ವಿದ್ಯಾಲಯವನ್ನು ದುರ್ಗಕ್ಕೆ ತರ ಬೇ ಕೆಂದು ಪ್ರಯತ್ನಿಸಿದ್ದರು.

ಈ ಹಿಂದೆ ವಿದ್ಯಾಲಯ ಆರಂಭಕ್ಕೆ ಉನ್ನತಮಟ್ಟದ ಸಮಿತಿ ಎರಡು ಬಾರಿ ಸ್ಥಳಪರಿಶೀಲಿಸಿದ್ದರೂ ಕೈಗೂಡಿರಲಿಲ್ಲ. ನಾರಾಯಣ ಸ್ವಾಮಿ ಅವರ ಅವಧಿ ಲೋಪದೋಷಗಳನ್ನು ಸರಿಪಡಿಸಿ 2019 ಜೂನ್21ರಂದು ಕೇಂದ್ರಕ್ಕೆ ಮರು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಉನ್ನತಮಟ್ಟದ ಸಮಿತಿ 2022ರ ನವೆಂಬರ್‌ನಲ್ಲಿ ಸ್ಥಳ ಪರಿಶೀಲಿಸಿದ್ದರೂ,ವಿದ್ಯಾಲಯಕ್ಕೆಂದು ಗುರುತಿಸಿದ್ದ ನಗರದ ಹೊರವಲಯ ಕುಂಚಿಗನಾಳ್ ಅಂ ದಾಜು 9 ಎಕರೆ ಜಾಗದಲ್ಲಿ ಜಾಗದಲ್ಲಿ ಹೈಟೆನ್ಷನ್ ಮಾರ್ಗ ಹಾದು ಹೋಗಿದ್ದರಿಂದಾಗಿ ಶಾಲಾ ಆರಂಭ ಯೋಜನೆ ಕೈಗೂಡಿರಲಿಲ್ಲ.

ಕೆಪಿಟಿಸಿಎಲ್‌ನಿಂದಲೇ ಅಂದಾಜು 1.10 ಕೋಟಿ ರೂ.ವೆಚ್ಚದಲ್ಲಿ ಹೈ-ಟೆನ್ಷನ್ ಮಾರ್ಗವನ್ನೂ ಸ್ಥಳಾಂತರಿಸಲಾಗಿತ್ತು. ಈಚೆಗೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಕೂಡ ಜೂನ್ 2024ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರಿಗೆ ಮರು ಪ್ರಸ್ತಾ ವನೆಯೊಂದಿಗೆ ವಿದ್ಯಾಲಯ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಪ್ರಥಮ ಅಧಿವೇಶನದಲ್ಲೇ ಕಾರಜೋಳ ವಿದ್ಯಾಲಯದ ಕುರಿತು ದನಿ ಎತ್ತಿದ್ದರು. ಸದ್ಯಕ್ಕೆ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಕಟ್ಟಡದಲ್ಲಿ ತರಗತಿಗಳು ಪ್ರಾರಂಭವಾಗಲಿದೆ. ವಿದ್ಯಾಲಯದ ಶೇ.50 ಬೋಧಕ,ಬೋಧಕೇತರ ಸಿಬ್ಬಂದಿಗೆ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ್ದ ಹಾಸ್ಟೆನಲ್ಲಿ ವಸತಿ ಕಲ್ಪಿಸಲಾಗುತ್ತದೆ.

ಚಳ್ಳಕೆರೆಯಲ್ಲಿ ಏಕಲವ್ಯಶಾಲೆ

ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದವರು ವಾಸವಿರುವ ಚಳ್ಳಕೆರೆ ತಾಲೂಕಿನಲ್ಲಿ ಕೇಂದ್ರ ಬುಡಕಟ್ಟು ಸಚಿವಾಲಯದಿಂದ ಏಕಲವ್ಯ ಮಾದರಿ ವಸತಿ ಶಾಲೆ ಸ್ಥಾಪಿಸುವಂತೆ ಕೇಂದ್ರ ಸಚಿವ ವೀರೇಂದ್ರ ಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಎಂಪಿ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಇದಕ್ಕಾಗಿ ಅಗತ್ಯ 15 ಎಕರೆ ಸರ್ಕಾರಿ ಜಮೀನು ಕಾಯ್ದಿರಿಸುವಂತೆ ಡಿಸಿಗೆ ಸೂಚಿಸಿದ್ದೇನೆ.

ಕೇಂದ್ರ ಸಂಸ್ಕೃತಿ ಸಚಿವಾಲಯದಿಂದ ಚಿತ್ರದುರ್ಗದಲ್ಲಿ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸುವಂತೆ ಕೇಂದ್ರ ಸಚಿವ ಗಜೇಂದ್ರ ಸಿ ಂಗ್ ಶೆಖಾವತ್ ಅವರಿಗೆ ಮನವಿ ಮಾಡಿದ್ದು,ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ 2 ಎಕರೆ ಜಮೀನು ಗುರುತಿಸಲು ಡಿಸಿಗೆ ತಿಳಿಸಿದ್ದೇನೆ. ಚಿ ತ್ರದುರ್ಗ ಜಿಲ್ಲೆಯಲ್ಲಿ ಮತ್ತೊಂದು ನವೋದಯ ವಿದ್ಯಾಶಾಲೆ ಸ್ಥಾಪನೆಗೆ ಅವಕಾಶವಿದ್ದು ಈ ನಿಟ್ಟಿನಲ್ಲೂ ಕಾರ್ಯೋನ್ಮುಖನಾಗಿದ್ದೇನೆ ಎಂದು ಸಂಸದರು ಹೇಳಿದ್ದಾರೆ.

ಹೊಸ ಶೈಕ್ಷಣಿಕ ವರ್ಷದಿಂದ ಕಾರ‌್ಯಾರಂಭ

ಕೇಂದ್ರೀಯ ವಿದ್ಯಾಲಯ 2025-26ನೇ ಶೈಕ್ಷಣಿಕ ಸಾಲಿನಿಂದ ದುರ್ಗದಲ್ಲಿ ಕಾರ‌್ಯಾರಂಭ ಮಾಡಲಿದ್ದು,ಜಿಲ್ಲೆಯ ಜನರ ಭಾವನೆಗಳಿಗೆ ಸ್ಪಂದಿಸಿರುವ ಕೇಂದ್ರ ಸಚಿವರು ಹಾಗೂ ಪ್ರಧಾನಿನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಅರ್ಪಿಸುವುದಾಗಿ ಗೋವಿಂದ ಕಾರಜೋಳ ಅ ವರು ಹೇಳಿದ್ದಾರೆ. ತಾತ್ಕಾಲಿಕವಾಗಿ ಶಾಲೆ ನಡೆಸಲು ಅಗತ್ಯ ಸಿದ್ದತೆಗಳಾಗಿವೆ. ಪ್ರಸ್ತುತ ಅಧಿವೇಶನ ಮುಗಿದ ತಕ್ಷಣ ಕೇಂದ್ರೀಯ ವಿದ್ಯಾಲಯದ ಬೆಂಗಳೂರು ಸಹಾಯಕ ಆಯುಕ್ತರನ್ನು ಕರೆಸಿ ಚರ್ಚಿಸುವುದಾಗಿ ಹೇಳಿದ್ದಾರೆ.

--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net