ಸತತ ಮಳೆಗೆ ಕುಸಿದ ಮನೆಗಳು

22-.kkr1.
Published on

ಕಿಕ್ಕೇರಿ: ಹೋಬಳಿಯಾದ್ಯಂತ ಸತತವಾಗಿ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮನೆಗಳು ಶಿಥಿಲಗೊಂಡಿವೆ. ತೆಂಗಿನಘಟ್ಟ ಗ್ರಾಮದಲ್ಲಿ ಬಹುತೇಕ ಹಳೆಯ ಮಣ್ಣಿನ ಗೋಡೆ ಮನೆಗಳು ಮಳೆಗೆ ನಲುಗಿವೆ. ತೇವಾಂಶದಿಂದ ಒಂದೊಂದಾಗಿ ಬೀಳುವಂತಾಗಿವೆ. ತೆಂಗಿನಘಟ್ಟ ಗ್ರಾಮದ ಸಿದ್ದೂರೇಗೌಡ, ಹರೀಶ್‌ಗೌಡ ಎಂಬುವರ ಮನೆಯ ಗೋಡೆಗಳು ತೇವಾಂಶಕ್ಕೆ ಒಳಗಾಗಿ ಬಿರುಕು ಬಿಟ್ಟಿವೆ. ಮನೆಯ ತಳಪಾಯವೇ ಕುಸಿಯುವಂತಾಗಿದ್ದು ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮನೆಯ ಒಳಗೆ ಹೋಗಲು ಭಯಭೀತರಾಗಿದ್ದು ಮನೆಯ ಹೊರಾಂಗಣದ ಹಜಾರದಲ್ಲೇ ಜೀವನ ಸಾಗಿಸುತ್ತಿದ್ದಾರೆ.


ಮೂಡಲಕೊಪ್ಪಲು ಗ್ರಾಮದಲ್ಲಿ ಉಜ್ಜನಿಗೌಡ ಎಂಬುವರ ಮನೆಯ ಗೋಡೆ ಕುಸಿದಿದೆ. ಛಾವಣಿ, ಜಂತಿಗಳು ಸಂಪೂರ್ಣ ಹಾಳಾಗಿವೆ. ನಾಡ ಹೆಂಚುಗಳು ಪುಡಿ ಪುಡಿಯಾಗಿವೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ದವಸ-ಧಾನ್ಯಗಳು ಒದ್ದೆಯಾಗಿವೆ. ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net