ಸತತ ಮಳೆ: ಮೂರು ಕಡೆ ಮನೆ ಕುಸಿತ

TTH RAIN WEB
Published on

ತೀರ್ಥಹಳ್ಳಿ: ತಾಲೂಕಿನಲ್ಲಿ ಮಳೆ ಮುಂದುವರೆದಿದ್ದು, ಮೂರು ಮನೆಗಳು ಕುಸಿದಿವೆ.

ಬುಧವಾರ ಸುರಿದ ಮಳೆಗೆ ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ವಿಠಲನಗರದ ದಲಿತ ಕಾಲನಿಯ ಶಾರದಾ ಎಂಬುವರ ಮನೆ ಕುಸಿದಿದೆ. ಬೆಜ್ಜವಳ್ಳಿಯ ಮಂಜುನಾಥ ಹಾಗೂ ಮೇಗರವಳ್ಳಿ ಗ್ರಾಪಂ ವ್ಯಾಪ್ತಿಯ ಶಿರೂರು ಜಾವಗಲ್ಲಿನಲ್ಲಿ ಡಾಕಪ್ಪ ಎಂಬುವರ ಮನೆ ಭಾಗಶಃ ನೆಲಸಮವಾಗಿದೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆ ಬಿರುಸು ತಗ್ಗಿದೆಯಾದರೂ ವಾತಾವರಣದಲ್ಲಿ ವಿಪರೀತ ಥಂಡಿ ಇದೆ. ಇದರಿಂದ ಅಡಕೆ ಮರಗಳಿಗೆ ಕೊಳೆರೋಗ ಬರುವ ಸಾಧ್ಯತೆ ಇದ್ದು, ಬೆಳೆಗಾರರಲ್ಲಿ ತೀವ್ರ ಆತಂಕ ವ್ಯಕ್ತವಾಗುತ್ತಿದೆ. ಬುಧವಾರ ಬೆಳಗಿನವರೆಗೆ ಆಗುಂಬೆಯಲ್ಲಿ 57.8 ಮಿ.ಮೀ. ಹಾಗೂ ತೀರ್ಥಹಳ್ಳಿಯಲ್ಲಿ 47.4 ಮಿ.ಮೀ. ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net