ಸತತ ಮಳೆ: ಭದ್ರಾವತಿಯಲ್ಲಿ ಮನೆ ಗೋಡೆ ಕುಸಿತ

BDVT WEB
Published on

ಭದ್ರಾವತಿ: ಸತತ ಮಳೆಯಿಂದಾಗಿ ನಗರದ ಹೊಸಮನೆಯಲ್ಲಿ ಗುರುವಾರ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ.

ವೆಂಕಟೇಶ ಎಂಬುವರು ಮನೆಯನ್ನು ಬಾಡಿಗೆಗೆ ಪಡೆದು ಪತ್ನಿ, ಇಬ್ಬರು ಸಣ್ಣ ಮಕ್ಕಳೊಂದಿಗೆ ವಾಸವಿದ್ದರು. ಬೆಳಗ್ಗೆ 10 ಗಂಟೆಯ ಸಮಯದಲ್ಲಿ ಗಂಡ, ಹೆಂಡತಿ ಕೆಲಸದ ಕಡೆಗೆ, ಮಕ್ಕಳು ಶಾಲೆಯ ಕಡೆಗೆ ತೆರಳಿದ್ದ ಸಂದರ್ಭದಲ್ಲಿ ಗೋಡೆ ಕುಸಿದಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ತ್ರಿವರ್ಣ ಧ್ವಜ ಸಿಕ್ಕಿಸಿದ್ದ ಮನೆಯ ಇನ್ನೊಂದು ಗೋಡೆಗೆ ಮಾತ್ರ ಯಾವುದೇ ಹಾನಿಯಾಗಿಲ್ಲ. ವೆಂಕಟೇಶ್ ಟೈಲರಿಂಗ್ ವೃತ್ತಿ ಮಾಡುತ್ತಿದ್ದು ಅವರ ಪತ್ನಿ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋಗುತ್ತಿದ್ದರು. ಸ್ಥಳಕ್ಕೆ ನಗರಸಭಾ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net