

ಸತತ ಪ್ರಯತ್ನವಿದ್ದರೇ ಮಾತ್ರ ವಿದ್ಯಾರ್ಥಿ ಜೀವನ ಸಫಲ
|ಕೆನರಾ ಬ್ಯಾಂಕ್ ನ ಸಹಾಯಕ ಜನರಲ್ ಮ್ಯಾನೇಜರ್ ಪನಿಶಯನಾ ಎಮ್ ಅಭಿಪ್ರಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ನಿಖರವಾದ ಗುರಿ ಮತ್ತು ಸತತ ಪ್ರಯತ್ನವಿದ್ದರೇ ಮಾತ್ರ ವಿದ್ಯಾರ್ಥಿ ಜೀವನ ಸಫಲವಾಗುತ್ತದೆ. ಸೋಲಿಗೆ ಎದೆಗುಂದದೇ ಸೋಲನ್ನು ಸವಾಲಾಗಿ ಸ್ವಿಕರಿಸಿ ಧೈರ್ಯಶಾಲಿಗಳಾಗಿ ಮುನ್ನುಗ್ಗಿದರೇ ಮಾತ್ರ ಭವಿಷ್ಯತ್ತಿನ ಜೀವನದಲ್ಲಿ ಯಶಸ್ವಿಯಾಗಲೂ ಸಾಧ್ಯ ಎಂದು ಕೆನರಾ ಬ್ಯಾಂಕ್ ನ ಸಹಾಯಕ ಜನರಲ್ ಮ್ಯಾನೇಜರ್ ಪನಿಶಯನಾ ಎಮ್ ಅಭಿಪ್ರಾಯ ಪಟ್ಟರು.
ಇಲ್ಲಿನ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ ಸಾಯನ್ಸ್ ವಿಭಾಗದ ವತಿಯಿಂದ ಇನ್ವೆಂಟ್ರಾ-2025, 24 ಗಂಟೆಗಳ ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆಯ ಶನಿವಾರ ಜರುಗಿದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದು ಜಗತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ನಿಮ್ಮಿಂದ ಹೊಸ ಅನ್ವೇಷಣೆಗಳಾಗಬೇಕು,ವಿವಿಧ ಕೌಶಲ ಹೊಂದಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರ ಡಾ. ಪ್ರಸಾದ ರಾಂಪುರೆ ಮಾತನಾಡಿ
ದೀಪಾವಳಿ ಹಬ್ಬದ ಸಮಯವಿದ್ದರೂ ಸಹಿತ ಹ್ಯಾಕಥಾನ್ ಸ್ಪರ್ಧೆಯಲ್ಲಿ ಬೇರೆ-ಬೇರೆ ಮಹಾವಿದ್ಯಾಲಯಗಳಿಂದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಇದೇ ರೀತಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಇಂಜಿನಿಯರ್ ಡಾ. ಮಹೇಶ ಹುದ್ದಾರ ಮಾತನಾಡಿದರು.
ಹ್ಯಾಕಥಾನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 40 ಸಾವಿರ ರೂ , ಕೋಲ್ಲಾಪುರ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜ ಆಫ್ ಇಂಜಿನಿಯರಿಂಗ್ ಕಾಲೇಜಿನ ಸುಶಾಂತ ಕುಂಬಾರ, ಆದಿತ್ಯ ಸುತಾರ, ಅವನಿ ಖೋತ, ರೇನು ಭೋಸಲೆ ತಂಡ, ದ್ವಿತೀಯ ಬಹುಮಾನ 30 ಸಾವಿರ ರೂ. ಬೆಳಗಾವಿಯ ಗೋಗಟೆ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ, ಪಿಯುಶ ಅಣ್ಣಿಗೇರಿ, ಓಂಕಾರ ಪುಟ್ಟಿ, ನಿತೇಶ ಕಲ್ಯಾನಶೆಟ್ಟಿ, ಕೀರ್ತಿಕಾ ಹೆರಕಲ ತಂಡ, ತೃತೀಯ ಬಹುಮಾನ 15ಸಾವಿರ ರೂ. ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಸೌರಭ ಸೂರ್ಯಕಾಂತ ಪಾಟೀಲ, ಅಂಕಿತಾ, ಬಸವರಾಜ ಕಾಗಲೆ, ಅಂಕುಶ ತಂಡ ಅವರು ಪಡೆದುಕೊಂಡಿತು.
ಡಾ.ಚಂದ್ರಕಾಂತ ಉಮರಾಣಿ,ಡಾ. ಸಂಜಯ ಅಂಕಲಿ,ಡಾ. ಬಾಹುಬಲಿ ಅಕಿವಾಟೆ,ಡಾ. ಸಚಿನ್ ಮೆಕ್ಕಳಕಿ, ಡಾ. ಸಂಜಯ ಹನಗಂಡಿ, ಪ್ರೊ. ಸುನೀಲ ಶಿಂಧೆ, ಪ್ರೊ. ಪ್ರದೀಪ ಹೊದ್ಲೂರ ಇತರರಿದ್ದರು.