ಸತತ ಪರಿಶ್ರಮದಿಂದ ಜ್ಞಾನ ಪ್ರಾಪ್ತಿ

11 hbd 02
Published on

ಹುಮನಾಬಾದ್: ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಗುರುಗಳ ಮಾರ್ಗದರ್ಶನದೊಂದಿಗೆ ಸತತ ಪರಿಶ್ರಮ ವಹಿಸಿ e್ಞÁನ ಪಡೆದು ಗುರಿ ಸಾಧಿಸಬೇಕು ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ೨೦೨೩-೨೪ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಿವಿಧ ಸಮಿತಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ನವ ಭಾರತ ನಿರ್ಮಾತೃಗಳಾಗಿದ್ದು, ಸಂಸ್ಕಾರಯುತ, ಗುಣಮಟ್ಟದ ಶಿP್ಷÀಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಶಿP್ಷÀಣದ ಜತೆಗೆ ಸಾಂಸ್ಕೃತಿಕ ಕ್ರೀಡಾ, ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಉತ್ತಮ ವಿದ್ಯಾಭ್ಯಾಸ ಪಡೆದು, ದೇಶಕ್ಕೆ ಕೊಡುಗೆ ನೀಡಬೇಕು ಎಂದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಪ್ರಾಶುಂಪಾಲ ಡಾ.ವೀರಣ್ಣ ತುಪ್ಪದ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಸಚಿನ, ಶಿವಶಂಕರ ತರನಳ್ಳಿ, ಡಿಸಿ ಬಿರಾದಾರ, ಕಾಶೀನಾಥ ವಾರದ, ಕರಣ ಜಾನವೀರ, ರವಿ ಮಾಡಗಿ, ಗಿರೀಶ ತುಂಬಾ, ಕಿರಣ ವಾಸಗಿ, ಗೋಪಾಲಕೃಷ್ಣ ಮೋಹಳೆ, ಧನಲಕ್ಷಿö್ಮÃ ಗೋಡಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net