

ಬೀದರ್: ವಿದ್ಯಾರ್ಥಿಗಳು ಸತತ ಅಧ್ಯಯನದ ಮೂಲಕವೇ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಇಲ್ಲಿನ ಕರ್ನಾಟಕ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು.
ಕಾಲೇಜಿನಲ್ಲಿ ಗುರುವಾರ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಕಾಲೇಜಿನಲ್ಲಿ 68 ಜನ ಎಂಫಿಲ್ ಹಾಗೂ 39 ಜನ ಪಿಎಚ್.ಡಿ ಪಡೆದಿದ್ದಾರೆ. ಇಲ್ಲಿ ಸುಸಜ್ಜಿತ ಗ್ರಂಥಾಲಯ, ಆಟದ ಮೈದಾನ, ಅತ್ಯುತ್ತಮ ಬೋಧನಾ ವ್ಯವಸ್ಥೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಎ ಗ್ರೇಡ್ ಪುರಸ್ಕಾರ ಕಾಲೇಜಿಗೆ ಸಿಕ್ಕಿದೆ. ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಹನೆ, ಅಧ್ಯಯನ ಹಾಗೂ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.
ಉಪ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಹಂಗರಗೆ ಮಾತನಾಡಿದರು. ವಿವಿಧ ವಿಭಾಗ ಮುಖ್ಯಸ್ಥರಾದ ಡಾ.ಉಮಾಕಾಂತ ಪಾಟೀಲ್, ಡಾ. ಶಶಿಧರ ಪಾಟೀಲ್, ಡಾ. ಪದ್ಮಿನಿ ಕಾಜಿ, ಡಾ. ಸಂಜೀವರೆಡ್ಡಿ, ಡಾ. ಸುನೀತಾ ಕೂಡ್ಲಿಕರ್, ಪ್ರಮುಖರಾದ ಡಾ.ಪೂಜಾ ಶ್ರೀಗಿರಿ, ಪ್ರೊ.ಶ್ರೀಕಾಂತ ದೊಡ್ಡಮನಿ, ಪ್ರೊ.ಶ್ರೀಕಾಂತ ಪಾಟೀಲ್, ಡಾ.ರಾಣಿಬಾಯಿ ಇತರರಿದ್ದರು. ಪಲ್ಲವಿ ನಿರೂಪಣೆ ಮಾಡಿದರು.