ಸಣ್ಣ ಸಮಾಜಗಳೇ ದೊಡ್ಡ ಶಕ್ತಿ

29SHP04
Published on

ಯಾದಗಿರಿ: ಸಣ್ಣ ಸಮುದಾಯಗಳೇ ನಾಡಿನ ದೊಡ್ಡ ಶಕ್ತಿ, ಹೂಗಾರ ಸಮಾಜವು ಸಣ್ಣದಾಗಿದ್ದರೂ ಎಲ್ಲಾ ಸಮಾಜ ಬಾಂಧವರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡು ಕಾಯಕದಲ್ಲಿ ನಿಷ್ಠೆಹೊಂದಿದ ಸಮಾಜವಾಗಿದೆ ಎಂದು ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ತಿಳಿಸಿದರು.

ಶಹಾಪುರ ಜೀವ್ಹೇಶ್ವರ ಕಲ್ಯಾಣಮಂಟಪದಲ್ಲಿ ನಡೆದ ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕಲ್ಯಾಣ ಕನರ್ಾಟಕ ಭಾಗದಲ್ಲಿ 371(ಜೆ) ಯಿಂದ ಎಲ್ಲಾ ಸಮಾಜಕ್ಕೂ, ಉದ್ಯೋಗ ಮತ್ತು ಶಿಕ್ಷಣಕ್ಕೆ ಉತ್ತಮ ಅವಕಾಶ ಸಿಕ್ಕಿವೆ. ಈ ಭಾಗದ ವಿದ್ಯಾಥರ್ಿಗಳು ಶೈಕ್ಷಣಿಕವಾಗಿ ಮುಂದೆ ಬಂದಾಗ ಮಾತ್ರ ಹೂಗಾರ ಸಮಾಜ ಬೆಳವಣಿಗೆಯಾಗಲು ಸಾಧ್ಯ. ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಈ ಮೂಲಕ ಶೈಕ್ಷಣಿಕವಾಗಿ ಹೂಗಾರ ಸಮಾಜ ಮುಂದೆ ತರುವ ಕೆಲಸ ಮಾಡಬೇಕು.

ಸಮಾಜದ ಬಹುದಿನದ ಬೇಡಿಕೆಯಾದ ಸಮುದಾಯ ಭವನಕ್ಕಾಗಿ ನಿವೇಶನ ಮತ್ತು ಸಮಾಜದಲ್ಲಿ ಸೂರಿಲ್ಲದವರ ಸಮರ್ಪಕ ಮಾಹಿತಿ ನೀಡಿದರೆ ಅವರಿಗೆ ನಿವೇಶನ ನೀಡುವ ಜವಾಬ್ದಾರಿ ನಮ್ಮದು. ನಿಮ್ಮ ಬೇಕು ಬೇಡಿಕೆಗಳಿಗೆ ಸದಾಕಾಲ ಸ್ಪಂಧಿಸುವೆ ಎಂದು ಅಭಯ ಹಸ್ತ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net