ಸಣ್ಣ-ಸಣ್ಣ ಸಮಾಜಗಳ ಶಕ್ತಿ ಪ್ರದರ್ಶನ ಅವಶ್ಯಕ-ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ.

14-MDLG-1.JPG
Published on


ಬೆಳಗಾವಿ: ಮುಂದಿನ ದಿನಗಳಲ್ಲಿ ಸಣ್ಣ-ಸಣ್ಣ ಸಮಾಜಗಳು ಒಂದಾಗಬೇಕು. ತಮ್ಮಗಳ ಶಕ್ತಿಯನ್ನು ತೋರಿಸಿಕೊಡಬೇಕು. ಒಗ್ಗಟ್ಟಾದರೇ ಮಾತ್ರ ರಾಜಕೀಯ ಅಧಿಕಾರ ಪಡೆಯಲಿಕ್ಕೆ ಸಾಧ್ಯವಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ  ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮೂಡಲಗಿ ಪಟ್ಟಣದ ಬಸವ ಮಂಟಪದಲ್ಲಿ ಮಂಗಳವಾರ ಜರುಗಿದ ವಿರಾಟ ವಿಶ್ವಕರ್ಮ ಸಮಾಜದ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗದಲ್ಲಿ ಸಣ್ಣ ಜನಾಂಗವಾಗಿರುವ ವಿಶ್ವಕರ್ಮ ಜನಾಂಗದವರು ಸಂಘಟಿತರಾಗಿ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯದ ತತ್ವದಡಿ ಅದು ಸಣ್ಣ ಸಮಾಜವಿರಲಿ, ದೊಡ್ಡ ಸಮಾಜವಿರಲಿ ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಅದರಂತೆ ಸಣ್ಣ ಸಮಾಜಗಳು ಸಹ ಮುಖ್ಯವಾಹಿನಿಗೆ ಬರಬೇಕು. ಒಗ್ಗಟ್ಟಿನಿಂದ ಸಂಘಟನೆ ನಡೆಯಬೇಕು ಎಂದರು.
ವಿಶ್ವಕರ್ಮ ಸಮಾಜ ಬಾಂಧವರು ನಿವೇಶನವನ್ನು ಗುರುತಿಸಿಕೊಟ್ಟರೇ ಸರ್ಕಾರದಿಂದ ಸಭಾ ಭವನ ನಿರ್ಮಿಸಲು ಸಿದ್ದನಿದ್ದೇನೆ. ಅಂದಾಜು 50ಲಕ್ಷ ರೂಗಳ ತನಕ ಅನುದಾನವನ್ನು ಈ ಸಮಾಜಕ್ಕೆ ನೆರವು ನೀಡುತ್ತೇನೆ. ಮೂಡಲಗಿಯ ಕಾಳಿಕಾದೇವಿ ದೇವಸ್ಥಾನದ ಅಭಿವೃದ್ದಿಗೆ 20ಲಕ್ಷ ರೂಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿಯೂ ಸಮಾಜಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದರು.
ಶಿರಸಂಗಿ ವಿಶ್ವಕರ್ಮ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೋ.ಪಿ.ಬಿ.ಬಡಿಗೇರ,ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ, ಶಿರಸಂಗಿ ವಿಶ್ವಕರ್ಮ ವಿಕಾಸ ಸಂಸ್ಥೆಯ ಉಪಾಧ್ಯಕ್ಷ ಭಗವಂತ ಪತ್ತಾರ, ಈಶ್ವರ ಬಡಿಗೇರ, ಶ್ರೀಕಾಂತ ಪತ್ತಾರ, ವೀರುಪಾಕ್ಷಿ ಪತ್ತಾರ, ವಂದನಾ ಸೋನಾರ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಮುಖಂಡ ಸಂತೋಷ ಸೋನವಾಲ್ಕರ, ಮಹಾದೇವ ಪತ್ತಾರ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net