ಸಣ್ಣ ವಿಷಯಕ್ಕೂ ಬಿಜೆಪಿ ರಾಜಕೀಯ

3..1
ರಾಯಬಾಗ ಪಟ್ಟಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ವೀರಕುಮಾರ ಪಾಟೀಲ, ಎಸ್.ಬಿ.ಘಾಟಗೆ, ಡಾ.ಎನ್.ಎ.ಮಗದುಮ್ಮ, ಮಹಾವೀರ ಮೋಹಿತೆ ಇತರರು ಇದ್ದರು.
Published on

ರಾಯಬಾಗ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿದ ಭರವಸೆಗಳನ್ನು ಸರ್ಕಾರ ಜಾರಿಗೊಳಿಸುತ್ತಿದ್ದು, ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಪ್ರತಿ ಮನೆಯಲ್ಲೂ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಮಹಾವೀರ ಭವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಬುಧವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರಿಂದ ಮತ್ತು ಅಭಿಮಾನಿಗಳಿಂದ ಸತ್ಕಾರ ಸ್ವೀಕರಿಸಿ ಮಾತನಾಡಿ, ಸುಮಾರು 50 ಸಾವಿರ ಕೋಟಿ ರೂ. ಮೊತ್ತದ 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಈಡೇರಿಸಲು ಸಾಧ್ಯ. ಸರ್ಕಾರವನ್ನು ಟೀಕಿಸಲು ಬಿಜೆಪಿಗೆ ಯಾವುದೇ ವಿಷಯ ಸಿಗದಿದ್ದಾಗ ಸಣ್ಣ ವಿಷಯಗಳಲ್ಲೂ
ರಾಜಕೀಯ ಮಾಡುತ್ತಿದೆ. ಮಣಿಪುರದ ಭಯಾನಕ ಅತ್ಯಾಚಾರ ಪ್ರಕರಣ ಬಿಟ್ಟು ಉಡುಪಿಯಲ್ಲಿ ನಡೆದ ವಿಡಿಯೋ ಚಿತ್ರೀಕರಣದ ಬಗ್ಗೆ ದೊಡ್ಡದಾಗಿ ಮಾತನಾಡುತ್ತಿದ್ದಾರೆ ಎಂದರು.

10 ವರ್ಷದಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ವೈಫಲ್ಯಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕು. ತತಕ್ಷಣದಿಂದಲೇ ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಂಡು ಹೆಚ್ಚಿನ ಸ್ಥಾನ ಗೆಲ್ಲುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕೆಂದರು.
ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಎಸ್.ಬಿ.ಘಾಟಗೆ, ಡಾ.ಎನ್.ಎ.ಮಗದುಮ್ಮ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಲಕ್ಷ್ಮಣರಾವ ಚಿಂಗಳೆ, ಸದಾಶಿವ ದೇಶಿಂಗೆ, ಅರ್ಜುನ ನಾಯಿಕವಾಡಿ, ರಾಜು ಶಿರಗಾಂವೆ, ನಾಮದೇವ ಕಾಂಬಳೆ, ಸಿದ್ದು ಬಂಡಗರ, ದಿಲೀಪ ಜಮಾದಾರ, ಹಾಜಿ ಮುಲ್ಲಾ, ಅಬ್ದುಲ್‌ಸತ್ತಾರ್ ಮುಲ್ಲಾ, ಅಪ್ಪಾಸಾಬ ಕುಲಗುಡೆ, ಕಿರಣ ಕಾಂಬಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net