ಸಣ್ಣ ಪಟ್ಟಣಗಳ ಅಭಿವೃದ್ಧಿಗೆ ಆದ್ಯತೆ

bhr mla
ಬಾಳೆಹೊನ್ನೂರಿನಲ್ಲಿ ಬೀದಿ ದೀಪಗಳ ಉದ್ಘಾಟನೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ ಪಾಲ್ಗೊಂಡಿದ್ದರು. ರವಿಚಂದ್ರ, ಅರುಣೇಶ್, ಮಧುಸೂದನ್, ಚನ್ನಕೇಶವ್, ಮಹಮ್ಮದ್ ಹನೀಫ್ ಇತರರಿದ್ದರು.
Published on

ಬಾಳೆಹೊನ್ನೂರು: ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸಣ್ಣ ಪಟ್ಟಣಗಳನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಡುವುದಾಗಿ ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಿಂದ ವಿವಿಧೆಡೆ ಶಾಸಕರ ಅನುದಾನದಲ್ಲಿ ಅಳವಡಿಸಿರುವ ಬೀದಿ ದೀಪಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಪಟ್ಟಣದ ಮುಖ್ಯರಸ್ತೆಗೆ 50 ಲಕ್ಷ ರೂ. ವೆಚ್ಚದಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಈ ಹಿಂದೆಯೇ ರಸ್ತೆ ಅಗಲೀಕರಣ, ಫುಟ್‌ಪಾತ್ ನಿರ್ಮಾಣ ಮಾಡಲಾಗಿತ್ತು. ಪಟ್ಟಣದ ಭದ್ರಾ ನದಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯರಸ್ತೆಯ ಕಾಮಗಾರಿ ಮುಗಿದ ಕಡೆಗಳಲ್ಲಿ ಬೀದಿ ದೀಪ ಅಳವಡಿಸಲಾಗುತ್ತಿದೆ. ಭದ್ರಾ ನದಿ ಸೇತುವೆ ಪೂರ್ಣಗೊಂಡ ನಂತರ ಹಾಗೂ ಪಟ್ಟಣದ ಕೊಪ್ಪ ರಸ್ತೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಿಂದ ಇಟ್ಟಿಗೆ ಸೀಗೋಡು ಬಿಜಿಎಸ್ ಕಾಲೇಜು ಮುಂಭಾಗದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಬೀದಿ ದೀಪ ಅಳವಡಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಮಾಗುಂಡಿ ಗ್ರಾಮದಲ್ಲಿ ರಸ್ತೆ ಅಗಲೀಕರಣ, ಫುಟ್‌ಪಾತ್ ಕಾಮಗಾರಿ ನಡೆಯುತ್ತಿದ್ದು, ಇನ್ನೂ 2 ಕೋಟಿಯಿಂದ 3 ಕೋಟಿ ರೂ. ಅವಶ್ಯಕತೆಯಿದೆ. ಜಯಪುರ, ಹರಿಹರಪುರ ಸೇರಿದಂತೆ ಕ್ಷೇತ್ರಾದ್ಯಂತ ಸಣ್ಣ ಪಟ್ಟಣಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.

ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ರಾಪಂ ಸದಸ್ಯರಾದ ಎಂ.ಎಸ್.ಅರುಣೇಶ್, ಬಿ.ಕೆ.ಮಧುಸೂದನ್, ಮಹ್ಮದ್ ಜುಹೇಬ್, ಸದಾಶಿವ, ಫಿಲೋಮಿನಾ, ಶಿವಪ್ಪ, ಶೇಖರ್, ಜಂಶೀದ್ ಅಹ್ಮದ್, ಪ್ರಮುಖರಾದ ಎಂ.ಎಸ್.ಚನ್ನಕೇಶವ್, ಎಂ.ಎಸ್.ಜಯಪ್ರಕಾಶ್, ಹೂವಮ್ಮ, ಕಾಫಿ ಗಿರೀಶ್, ವಿನ್ಸಿ ಲೋಬೋ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net