

ಚಿತ್ರದುರ್ಗ: ಕೆರೆ ಅಭಿವೃದ್ಧಿ ಪ್ರಾಧಿಕಾರದ ಬಲವರ್ಧನೆಗೆ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ ನೇತೃತ್ವದಲ್ಲಿ ಜತೆ ಸಭೆ ನಡೆ ಸೋಣವೆಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರು ಹೇಳಿದರು. ಈಚೆಗೆ ಸೀಬಾರದ ಎಸ್.ಎನ್.ಸ್ಮಾರಕ‘ಪುಣ್ಯಭೂಮಿ’ಯಲ್ಲಿ ನ ಡೆದ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು,ಪ್ರಾಧಿಕಾರದ ಬಲವರ್ಧನೆಗೆ ಸ ಚಿವರೊಂದಿಗೆ ಸಭೆ ನಡೆಸೋಣವೆಂದು ಒಕ್ಕೂಟದ ಸದಸ್ಯರಿಗೆ ಭರವಸೆ ನೀಡಿದರು.
ಬೇಡಿಕೆಗಳ ಪಟ್ಟಿ ಕೊಡಿ. ಎಲ್ಲರೂ ಸೇರಿ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸೋಣ. ಜಿಲ್ಲೆಯ ಜನರ ಋಣ ನನ್ನ ಮೇಲಿದೆ. ನಿಮ್ಮ ನಂಬಿಕೆಗೆ ಧಕ್ಕೆ ಬಾರದಂತೆ ಕೆಲಸ ಮಾಡುತ್ತೇನೆ ಎಂದರು. ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂ ಟದ ಅಧ್ಯಕ್ಷ ಬಿ.ನಾಗರಾಜಯ್ಯ,ಉಪಾಧ್ಯಕ್ಷ ಬಿ.ಎಸ್.ಐಯ್ಯಣ್ಣ,ಕಾರ್ಯದರ್ಶಿ ಒ.ಆನಂದ,ಸಹ ಕಾರ್ಯದರ್ಶಿ ಜಗದೀಶ್‌ನಾಡಿಗ್, ಖಜಾಂಚಿ ಜಿ.ಭೋಜರಾಜ,ನಿರ್ದೇಶಕರಾದ ಸಿ.ಆರ್.ನಾಗರಾಜ,ಪಿ.ಎಂ.ಸಿದ್ದಪ್ಪ,ಜಿ.ಕೆ.ಕುಮಾರ್,ಜಿ.ಎಂ.ನಾಗೇಂದ್ರಪ್ಪ,ಬಿ.ಎಲ್.ನಾಗ ರಾಜ,ಟಿ.ರೂಪಾ,ಆರ್.ಮಲ್ಲೇಶಪ್ಪ,ಡಿ.ಬಿ.ಸಿದ್ದಪ್ಪ,ಆರ್.ಎನ್.ಚಂದ್ರಪ್ಪ,ಜಿ.ಕೆ.ರಂಗನಾಥ್,ಎನ್.ಶಿವಕುಮಾರ್,ಟಿ.ರಾಮ ಚಂದ್ರಪ್ಪ, ಆರ್.ಕೃಷ್ಣಪ್ಪ,ಎಚ್.ಟಿ.ಚಂದ್ರಶೇಖರಯ್ಯ,ಕೆ.ಟಿ.ಜಯನಾಯ್ಕ,ರಘುನಂದನ,ಜಿ.ಶಂಕರಪ್ಪ ಮತ್ತಿತರರು ಇದ್ದರು.