ಸಣ್ಣ ಉಳಿತಾಯ ಕುಟುಂಬಕ್ಕೆ ಭದ್ರತೆ

CLK SKDRDP 27 (1)
Published on

ಚಳ್ಳಕೆರೆ: ಸಣ್ಣ ಉಳಿತಾಯ ಮನೋಭಾವನೆ ಕುಟುಂಬದ ಆರ್ಥಿಕ ಭದ್ರತೆಗೆ ಆಧಾರವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ವಿನಯ್‌ಕುಮಾರ್ ಹೇಳಿದರು.
ನಗರದ ರಹೀಂ ನಗರದಲ್ಲಿ ಸಂಸ್ಥೆಯ ಮಹಿಳಾ ಒಕ್ಕೂಟದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಸಂಘಗಳು ಸಮಾಜಮುಖಿಯಾಗಿ ಬೆಳೆಯಬೇಕಿದೆ. ಉಳಿತಾಯ ಕಾರ್ಯ ಚಟುವಟಿಕೆಗಳಿಂದ ಸ್ವಯಂ ಉದ್ಯೋಗ ಮತ್ತು ಕುಟುಂಬ ನಿರ್ವಹಣೆಗೆ ಸುಲಭ ಆಗಬೇಕು. ಸಂಘದ ದಾಖಲಾತಿ ಮತ್ತು ಬ್ಯಾಂಕ್ ವ್ಯವಹಾರ ನಿರ್ವಹಣೆಯಲ್ಲಿ ಪರಿಪೂರ್ಣತೆ ಇದ್ದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಸಂಘದ ಸಾಮಾಜಿಕ ಜವಾಬ್ದಾರಿಯಲ್ಲಿ ಅಂಗವಿಕಲರ ಮಾಶಾಸನ, ಸುಜ್ಞಾನ ನಿಧಿ, ಶಿಷ್ಯ ವೇತನ, ವಾತ್ಸಲ್ಯ ಮನೆ ನಿರ್ಮಾಣ ಮತ್ತು ಸಲಕರಣೆಗಳ ಕಿಟ್ ವಿತರಣೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಸಂಘದ ಮಹಿಳಾ ಕುಟುಂಬಗಳು ಸಬಲೀಕರಣವಾಗುವ ರೀತಿಯಲ್ಲಿ ಯೋಜನೆಗಳು ಸದುಪಯೋಗ ಆಗಬೇಕು ಎಂದು ಕಿವಿಮಾತು ಹೇಳಿದರು.
ಒಕ್ಕೂಟದ ಅಧ್ಯಕ್ಷೆ ಸಣ್ಣತಿಮ್ಮಕ್ಕ, ಎನ್.ಸಾವಿತ್ರಮ್ಮ, ಎಂ.ತುಳಸಿ, ಹಸೀನಾ, ಮಂಜುಳಾ, ಪುಷ್ಪಾ, ಶ್ರೀದೇವಿ, ಲಕ್ಷ್ಮೀದೇವಿ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net