

ಗೋಕಾಕ: ನಗರ ಸೇರಿ ತಾಲೂಕಿನ ವಿವಿಧೆಡೆ ಮೊಹರಂ ಹಬ್ಬವನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ವಿವಿಧ ಕಡೆಗಳಲ್ಲಿ ಸ್ಥಾಪಿಸಲಾದ ಪಂಜಾಗಳು ಮೆರವಣಿಗೆ ಮುಖಾಂತರ ಹಳೆಯ ದನಗಳ ಪೇಟೆಯಲ್ಲಿ ಭೇಟಿ ಮಾಡಿದವು. ರಾತ್ರಿ 8 ಗಂಟೆಗೆ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ತಾಬೂತ್ ವಿಸರ್ಜನೆ ನಡೆಯಿತು.
ಮುಗಳಿಹಾಳ ಗ್ರಾಮದೇವಿ ಜಾತ್ರೆ ನಿಮಿತ್ತ ಬುಧವಾರ ಏರ್ಪಡಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಉದ್ಘಾಟಿಸಿದರು. ಅಶೋಕ ಪಟ್ಟಣಶೆಟ್ಟಿ, ನಾಗಪ್ಪ ಪುಂಜಿ, ರಾಮನಗೌಡ ಗಂಗರೆಡ್ಡಿ, ರಾಮಸಿದ್ದಪ್ಪ ಧರ್ಮಟ್ಟಿ, ಗೋಪಾಲ ದಳವಾಯಿ ಇತರರಿದ್ದರು.