ಸಡಗರದ ರಥೋತ್ಸವ

14KDR1 WEB
Published on

ಕಡೂರು: ಪಟ್ಟಣದ ಕೋಟೆ ತೇರು ಬೀದಿಯಲ್ಲಿ ಭಾನುವಾರ ಶ್ರೀ ಗುರು ರಾಘವೇಂದ್ರ ರಾಯರ ಉತ್ತರಾರಾಧನೆ ಅಂಗವಾಗಿ ಪ್ರಹ್ಲಾದ ರಾಜರ ರಥೋತ್ಸವ ಸಡಗರ, ಸಂಭ್ರಮದಿಂದ ನಡೆಯಿತು. ಬೆಳಗ್ಗೆ 6 ಗಂಟೆಗೆ ರಾಯರ ಮೃತ್ತಿಕಾ ವೃಂದಾವನದಲ್ಲಿ ನಿರ್ವಲ್ಯ ವಿಸರ್ಜನೆ, ಅಷ್ಟೋತ್ತರದೊಂದಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ನೆರವೇರಿದವು. ನಂತರ ಅಲಂಕೃತಗೊಂಡ ರಥದಲ್ಲಿ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವ ನಡೆಸಲಾಯಿತು. ಕೋಟೆಯ ತೇರು ಬೀದಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಭಕ್ತರು ನೆರೆದಿದ್ದರು. ರಥೋತ್ಸವದಲ್ಲಿ ಭಜನಾ ಮಂಡಳಿಯಿಂದ ರಾಯರ ಭಜನೆ, ಜಯಘೊಷಗಳು ಮೊಳಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net