

ಎಚ್.ಡಿ.ಕೋಟೆ: ಕ್ಯಾತನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಮೂಗು ಮಾರಮ್ಮ ಹಬ್ಬ ಸಡಗರದಿಂದ ನಡೆಯಿತು. ಗ್ರಾಮವು ಹಸಿರು ಚಪ್ಪರ, ತೋರಣ, ಬಣ್ಣ ಬಣ್ಣದ ರಂಗೋಲಿ, ಮನೆಗಳ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.
ಮಂಗಳವಾರ ರಾತ್ರಿ ಗ್ರಾಮ ದೇವಿಗೆ ದೇವರ ಬಾವಿಯ ಬಳಿ ಪೂಜೆ ಸಲ್ಲಿಸಿ ಭಕ್ತರು ಬಾಯಿ ಬೀಗ ಹಾಕಿಸಿಕೊಂಡು ದೇವರ ಸತ್ತಿಗೆ ಸಮೇತ ಮಂಗಳವಾದ್ಯ, ತಮಟೆ ವಾದಗಳೊಂದಿಗೆ ಮೆರವಣಿಗೆ ತೆರಳಿದರು. ನಂತರ ದೇವಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ರಾತ್ರಿ 11.30 ಕ್ಕೆ ಹೋಮ ಹವನ ನೆರವೇರಿದವು. ರಾತ್ರಿ 1.30 ಗಂಟೆಗೆ ಮಡೆ ಪೂಜೆ ನೆರವೇರಿಸಲಾಯಿತು.
ಬುಧವಾರ ಬೆಳಗ್ಗೆ 5 ಗಂಟೆಗೆ ತಂಪಿನ ಪೂಜೆ ಪ್ರಾರಂಭಗೊಂಡು 11.45 ಕ್ಕೆ ಮುಗಿಯಿತು. ಮಾರಿಗುಡ್ಡಪ್ಪ ಚಿಕ್ಕನಾಯಕ ಅವರ ಪುತ್ರ ಡಾ.ಕೆ.ಸಿ.ರಾಜ ಸಂಪ್ರದಾಯದಂತೆ ಗ್ರಾಮದ ಸುತ್ತಲೂ ತಮಟೆ ವಾದ್ಯಗಳ ಸಮೇತವಾಗಿ ರಕ್ತದ ಓಕುಳಿ ನೆರವೇರಿಸಿದರು. ಗ್ರಾಮಸ್ಥರು ದೇವಿಗೆ ಹರಕೆ ತೀರಿಸಿದರು.
ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ಡೇರಿ ಅಧ್ಯಕ್ಷ ಕೆ.ಪಿ.ಚಲುವರಾಜು, ಟ್ರಸ್ಟ್ ಅಧ್ಯಕ್ಷ ಎಸ್.ಬೀರೇಗೌಡ, ಉಪಾಧ್ಯಕ್ಷ ಜೆ. ಜಗನ್ನಾಥ್, ಕಾರ್ಯದರ್ಶಿ ಸಣ್ಣಸ್ವಾಮಿ ಆಚಾರ್, ಎನ್.ವೆಂಕಟರಾಜು, ಕೆ.ಕಾಳಸ್ವಾಮಪ್ಪ, ಚಿಕ್ಕಮಾಲೇಗೌಡ, ಮಹದೇವಪ್ಪ, ಎಸ್.ಶಿವರಾಜು, ಚೆಲುವರಾಜು, ಕೆ.ಸಿ.ಪುಟ್ಟೇಗೌಡ, ಕೃಷ್ಣೇಗೌಡ, ರಾಮಚಂದ್ರ, ಕೆ.ಆರ್.ರವಿಕುಮಾರ್, ಬೀರೇಶ್, ಅಪ್ಪಾಜಿಗೌಡ, ಮಂಜು, ಮಹದೇವಣ್ಣ, ಜವರಶೆಟ್ಟಿ, ಮಹದೇವಶೆಟ್ಟಿ, ಶಿವಶಂಕರೇಗೌಡ, ಪ್ರಸನ್ನಕುಮಾರ್, ನಂಜಪ್ಪ, ರವಿ, ಕುಮಾರ್, ಕೆ.ಟಿ.ಬಸಪ್ಪ, ಎಚ್.ನಾಗರಾಜ್, ರಮೇಶ, ಮಂಜು, ಶಿವಣ್ಣ, ಶ್ರೀನಿವಾಸ್, ಸೋಮಣ್ಣ, ಜವರಶೆಟ್ಟಿ, ಕೆ.ಸಿ.ಬಸವರಾಜು, ರೇವಣ್ಣ, ರಾಚಪ್ಪ, ಮಹದೇವ, ಮಹದೇವನಾಯಕ, ಶಿವಲಿಂಗನಾಯಕ, ರಂಗ, ಸಿದ್ದರಾಜು ಹಾಜರಿದ್ದರು. ಸಬ್ ಇನ್‌ಸ್ಪೆಕ್ಟರ್ ಚಿಕ್ಕನಾಯಕ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿತ್ತು.